Karnataka NewsNational
BIGG NEWS : ಬೆಳಗಾವಿಯಲ್ಲಿ ನಟ ಶಿವರಂಜನ್ ಮೇಲೆ ಫೈರಿಂಗ್ : ಬೆಚ್ಚಿಬಿದ್ದ ಜನತೆ

ಬೆಳಗಾವಿ : ಮಂಗಳವಾರ ರಾತ್ರಿ ಚಿತ್ರನಟ ಶಿವರಂಜನ್ ಬೋಳಣ್ಣನವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಭಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾರುತಿ ದೇವಸ್ಥಾನದ ಬಳಿ ನಡೆದಿದೆ.
ಬೈಲಹೊಂಗಲ ಪಟ್ಟಣದ ಮಾರುತಿ ದೇವಸ್ಥಾನದ ಬಳಿ ಇರುವ ಶಿವರಂಜನ್ ಬೋಳಣ್ಣವರ ಅವರ ಹಳೆಯ ಮನೆ ಬಳಿ 3-4 ಸುತ್ತು ಫೈರಿಂಗ್ ನಡೆದಿದೆ. ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ.
ಆಸ್ತಿ ವಿಚಾರವಾಗಿ ಈ ಶೂಟೌಟ್ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.