ಗುಂಡಿನ ದಾಳಿಗೊಳಗಾದ ನಟ ಶಿವರಂಜನ ಬೋಳಣ್ಣನವರ ಹೇಳಿದ್ದೇನು???

ಬೈಲಹೊಂಗಲತಾಲೂಕಿನ ಜನತೆಯ, ನಾಡಿನಗುರು, ಹಿರಿಯರು, ಅಭಿಮಾನಿಗಳು, ಹಿತೈಷಿಗಳ ಆಶೀರ್ವಾದದಿಂದ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ನಟ ಶಿವರಂಜನ ಬೋಳಣ್ಣವರ ತಿಳಿಸಿದರು.
ಮಂಗಳವಾರ ರಾತ್ರಿಬೈಲಹೊಂಗಲನ ನಟ ಮತ್ತುಉದ್ಯಮಿಶಿವರಂಜನ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.ಇಂದುಬುಧವಾರ ಬೆಳಗ್ಗೆ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದಅವರುತಮ್ಮ ಮೇಲೆ ಐದು ಸುತ್ತಿನಗುಂಡಿನ ದಾಳಿ ನಡೆಸಲಾಗಿದೆ.ಈ ಘಟನೆಯಲ್ಲಿ ಸುದೈವಶಾತ್‍ಯಾವುದೇ ಪ್ರಾಣಾಪಾಯವಾಗಿಲ್ಲ.
ಇದರಿಂದ ನಾನು ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿರುವೆ. ಇದರ ಮಾಹಿತಿ ತಿಳಿಯುತ್ತಿದ್ದಂತೆ, ಜಿಲ್ಲಾ ಪೊಲೀಸ.ಸಂಜೀವ ಪಾಟೀಲ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ ಸೇರಿದಂತೆಜಿಲ್ಲೆಯ, ಪಟ್ಟಣದ ಪೊಲೀಸ ಅಧಿಕಾರಿಗಳು, ಸಿಬ್ಬಂದಿ ಬಂದು ವಿಚಾರಣೆ ನಡೆಸಿ ತನಿಖೆ ನಡೆಸಿದರು.ಈ ವೇಳೆ ಮುಂದುವರೆದು ಮಾತನಾಡಿದ ಅವರುನನ್ನ ಸಹೋದರ ಸಂಬಂಧಿಯಿಂದ ಗುಂಡಿನ ದಾಳಿ ನಡೆಸಲಾಗಿದೆ.ದೇವರದಯೇ, ಹಿರಿಯರ ಆಶೀರ್ವಾದಿಂದ ಯಾವುದೇರೀತಿಯ ತೊಂದರೆ ಆಗಿಲ್ಲಎಂದರು.