Crime News
ಸಾಲಬಾಧೆ ತಾಳಲಾರದೇ ನೇಣಿಗೆ ಶರಣಾದ ಅಂಬೇವಾಡಿ ರೈತ

ಸಾಲಬಾಧೆ ತಾಳಲಾರದೇ ರೈತನೊರ್ವ ವ್ಯಕ್ತಿನೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ನಡೆದಿದೆ.
ಅಂಬೇವಾಡಿಯ 45 ವರ್ಷದ ಯಲ್ಲಪ್ಪಾ ಬಾಬು ತರಳೆ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇಂದು ಬೆಳಗ್ಗೆ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತೀಯಾಗಿ ಸಾಲ ಮಾಡಿಕೊಂಡಿದ್ದ ಯಲ್ಲಪ್ಪಾ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಗುರುನಾಥ ಸಿಬ್ಬಂದಿ ವಿರುಪಾಕ್ಷಿ ಮಾನಗಾವಿ, ಮಹಾದೇವ ಯರಗುದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.