ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆಗೆ ಯತ್ನಿಸಿದ ರಾಮ ಸೇನೆ ಜಿಲ್ಲಾಧ್ಯಕ್ಷ

ಧಾರವಾಡ: ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆ ಮಾಡಲು ಯತ್ನ ನಡೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ರಾಮ ಸೇನೆಯ ಜಿಲ್ಲಾಧ್ಯಕ್ಷ ವಿಜಯ್ ಕದಂ ಅಟ್ಯಾಕ್ ಮಾಡಿಸಿದ್ದಾರೆ ಎನ್ನಲಾಗಿದೆ. ವಿಜಯ್ ಕದಂ ಸೋನಾಪುರ ಬಡಾವಣೆಯಲ್ಲಿ ಪದ್ಮಾ ಬೆಟಗೇರಿ ಹತ್ಯೆಗೆ ಯತ್ನಿಸಿದ್ದಾರೆ.
ವಿಜಯ್ ಕದಂ ಹಾಗೂ ಪದ್ಮಾ ಬೆಟಗೇರಿ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಆದ್ರೆ ಪದ್ಮಾ, ವಿಜಯ್ನನ್ನು ಆತನ ಮೊದಲ ಪತ್ನಿ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಹಾಗೂ ಮೊದಲನೇ ಪತ್ನಿ ಬಳಿ ಹೋಗದಂತೆ ಪದ್ಮಾ ಕಿರಿಕಿರಿ ಮಾಡ್ತಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಕೋಪಗೊಂಡಿದ್ದ ವಿಜಯ್ನಿಂದ ಪದ್ಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪದ್ಮಾಳನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೃತ್ಯದ ಬಳಿಕ ವಿಜಯ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಈ ಘಟನೆಗೂ ಮುನ್ನ ಇಬ್ಬರ ನಡುವೆ ಜಗಳ ಶುರುವಾಗಿತ್ತು. ನೀನು ಮನೆಗೆ ಬರಬೇಡ ಅಂತಾ ಪದ್ಮಾ ತಾಕೀತು ಮಾಡಿದ್ದಳು. ಕೈಯಲ್ಲಿ ಚಾಕು ಹಿಡಿದು ಹೊರ ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಳು. ಬೆದರಿಕೆಯೊಡ್ಡಿದ ದೃಶ್ಯಗಳನ್ನು ವಿಜಯ್ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.