
ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು “ಎಕ್ಸ್‌ಪೋಸ್” ಮಾಡುತ್ತಾರೆ.
सोलापूरच्या भाजपचे जिल्हाध्यक्ष श्रीकांत देशमुख यांचा एका महिलेसोबतचा आक्षेपाहार्य व्हिडीओ व्हायरल झाला आहे. #shrikantdeshmukh #bjp #solapur pic.twitter.com/xbepBz2BnC
— TV9 Marathi (@TV9Marathi) July 12, 2022
ಐಷಾರಾಮಿ ಕೊಠಡಿಯ ಬೆಡ್ ಮೇಲೆ ರಾಜಕಾರಣಿ ಕುಳಿತಿದ್ದು, ಆ ಮಹಿಳೆಯು ಮೊಬೈಲ್ ಕ್ಯಾಮರಾದ ಆನ್ ಮಾಡಿ ಆತನ ಬಂಡವಾಳ ಬಿಚ್ಚಿಡುತ್ತಾಳೆ.
ತನ್ನ ಹೆಸರನ್ನು ಹೇಳಿಕೊಂಡು, ಇವನು ನನಗೆ ಮೋಸ ಮಾಡಿದ ವ್ಯಕ್ತಿ. ಅವನು ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಾಳೆ. ಆಕೆಯ ಕೊರಳಿನಲ್ಲಿ ಮಂಗಳಸೂತ್ರವೂ ಕಾಣಿಸುತ್ತದೆ.
ಈ ವೇಳೆ ಆತ ವಿಡಿಯೋ ಮಾಡದಂತೆ ಅಡ್ಡಿ ಮಾಡುತ್ತಾನೆ. ಆದರೆ ಆ ಮಹಿಳೆ, ಈಗ ನೋಡು.. ನಾನು ನಿನ್ನನ್ನು ಬಿಡುವುದಿಲ್ಲ. ನೀನು ನನಗೆ ಯಾಕೆ ಸುಳ್ಳು ಹೇಳಿದೆ? ಎಂದು ಪ್ರಶ್ನಿಸುತ್ತಾಳೆ. ಆಗ ಕ್ಯಾಮೆರಾ ಆಫ್ ಆಗುತ್ತದೆ. ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.