ವರದಿ ಗುರುವಚನ ಕುದರಿಮಠ ಮೀಸಲಾತಿ ಪ್ರಮಾಣ ಪತ್ರಕ್ಕೆ ಬೇಡ ಜಂಗಮರ ಆಗ್ರಹ

ವರದಿ ಗುರುವಚನ ಕುದರಿಮಠ
ಮೀಸಲಾತಿ ಪ್ರಮಾಣ ಪತ್ರಕ್ಕೆ ಬೇಡ ಜಂಗಮರ ಆಗ್ರಹ
ಬೆಂಗಳೂರಿನಲ್ಲಿ ನಡೆಯುತ್ತಿರುವ
ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ಗೋಕಾಕ ತಾಲೂಕಿನಿಂದ ಸುಮಾರು 500 ಕ್ಕಿಂತ ಹೆಚ್ಚು ಜನ ಬೇಡಜಂಗಮರು ಬೃಹತ್ ಪ್ರಮಾಣದಲ್ಲಿ ಪ್ರತಿಬಟನೆಯಲ್ಲಿ ಭಾಗವಹಿಸುತ್ತೇವೆ ಎಂದು ತಾಲೂಕ ಅಧ್ಯಕ್ಷರಾದ ಗುರುಬಸಯ್ಯಕರ್ಪೂರಮಠ ತಿಳಿಸಿದರು.
ಈವಿಷಯಕ್ಕೆ ಸಂಬಂದಿಸಿದಂತೆ ದಿ20-7-2022 ಬುಧವಾರ ದಿನದಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಸತ್ಯಪ್ರತಿಪಾದನಾ ಸತ್ಯಾಗ್ರಹದಲ್ಲಿ ಭಾಗವಹಿಸಲು ತಾಲೂಕಿನಿಂದ 500ಕ್ಕಿಂತ ಹೆಚ್ಚು ಜನ ಬೇಡಜಂಗಮರು ಹೊರಡಲಿದ್ದಾರೆ
ಕಳೆದ 15 ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಅಖಿಲ ಕರ್ನಾಟಕರಾಜ್ಯ ಬೇಡಜಂಗಮ ಒಕ್ಕೂಟದ ಅದ್ಯಕ್ಷರಾದಶ್ರೀ ಬಿ.ಡಿ.ಹಿರೇಮಠರ ನೇತೃತ್ವದಲ್ಲಿ ಹಾಗು ಹರಗುರು ಮಠಾದೀಶರ ಸಾನಿಧ್ಯದಲ್ಲಿ ನಡೆಯುತ್ತಿರುವ ಬೇಡಜಂಗಮರ ಮೀಸಲಾತಿ ಜಾತಿ ಪ್ರಮಾಣ ಪತ್ರದ ಸಲುವಾಗಿ ಸತ್ಯಪ್ರತಿಪಾದನಾ ಸತ್ಯಾಗ್ರಹದಲ್ಲಿ ಘಟಪ್ರಭಾ ಮತ್ತು ಗೋಕಾಕದಿಂದ ಸುಮಾರು 500ಕ್ಕಿಂತ ಹೆಚ್ಚು ಜನ ಬೇಡ ಜಂಗಮರು ಬೆಂಬಲ ಕೊಡಲಿಕ್ಕೆ ದಿ-19-7-2022 ರಂದು ಸಂಜೆ ರೈಲು ಹಾಗು ವಾಹನಗಳ ಮುಖಾಂತರ ಬೆಂಗಳೂರಿಗೆ ತೆರಳಲಿದ್ದಾರೆ.
ಈ ಸತ್ಯಾಗ್ರಹದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೇಂದು ಅಖಿಲ ಕರ್ನಾಟಕ ಬೇಡಜಂಗಮರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಎಲ್ಲರಿಗೂ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ ಎಂದು ಸಹ ತಿಳಿಸಿದರು.
ಜಿ.ಎಸ್.ಕರ್ಪೂರಮಠ ಗೋಕಾಕ ತಾಲೂಕಾ ಸಂಚಾಲಕರು, ಸಿದ್ದಲಿಂಗಯ್ಯಾ ಹಿರೇಮಠ ಗ್ರಾಮೀಣ ಅಧ್ಯಕ್ಷರು , ಮಹಾದೇವ ಹಿರೇಮಠ , ಮಲ್ಲಿಕಾರ್ಜುನ ಮಠಪತಿ, ಕಲ್ಲಯ್ಯಾ ಕಳ್ಳಿಮಠ ಮಹಾಂತೇಶ ಹಿರೇಮಠ, ಬಸಯ್ಯಾ ಪೂಜೇರಿ
ಶಂಕ್ರಯ್ಯ ವಸ್ತ್ರದ ಮುಂತಾದವರು ಉಪಸ್ಥತರಿದ್ದರು.