ಹುಕ್ಕೇರಿ ಪೊಲೀಸರಿಂದ ಅಂತರ ರಾಜ್ಯಗಳಲ್ಲಿ ಕಳ್ಳತನ ಮಾಡುವ ಇರಾನಿ ಗ್ಯಾಂಗನ ಇಬ್ಬರ ಬಂಧನ

ಹುಕ್ಕೇರಿ ಪೋಲಿಸರಿಂದ ಇರಾನಿ ಗ್ಯಾಂಗ ಅಂದರ್ ಹಣ ಬಂಗಾರ ವಶಪಡಿಸಿಕೊಂಡ ಹುಕ್ಕೇರಿ ಪೋಲಿಸರು.
ಹುಕ್ಕೇರಿ ಪೊಲೀಸರಿಂದ ಅಂತರ ರಾಜ್ಯಗಳಲ್ಲಿ ಕಳ್ಳತನ ಮಾಡುವ ಇರಾನಿ ಗ್ಯಾಂಗನ ಇಬ್ಬರ ಬಂಧನ: 9,58,000/-ರೂ ಮೌಲ್ಯದ ಬಂಗಾರದ ಆಭರಣ, ನಗದು ವಶ ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜುವೇಲರಿ ಶಾಪ್‌ನಲ್ಲಿ ಮಾಲಕನ ಗಮನವನ್ನು ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸ್ ಇನ್ಸ್‌ಕರ್ ಮಹಮ್ಮದ ರಫಿಕ ತಹಶಿಲ್ದಾರ ಮತ್ತು ಅವರ ತಂಡದ ಸಿಬ್ಬಂದಿಗಳು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಳ್ಳತನ ಮಾಡುವ ಪೂನಾದ ಇರಾನಿ ಗ್ಯಾಂಗ್‌ನ ಇಬ್ಬರೂ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯಲ್ಲಿ ಹುಕ್ಕೇರಿ ಪಟ್ಟಣದ ಕಿರಾಣಿ ಅಂಗಡಿ ಮತ್ತು ಜ್ಯೂವೇಲರಿ ಶಾಪ್‌ನಲ್ಲಿ ಕಳ್ಳತನ ಮಾಡಿದಂತೆ, ಮೂಡಲಗಿ ಹಾಗೂ ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗಾರದ ಅಂಗಡಿಗಳನ್ನು ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿರುತ್ತಾರೆ.
ಬಂಧಿತ ಕಳ್ಳರಿಂದ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿ ಹೋದ 2,08,000/ ರೂ ನಗದು ಹಾಗೂ ಬಂಗಾರದ ಅಂಗಡಿಯ ಕಳ್ಳತನಕ್ಕೆ ಸಂಬಂಧಿಸಿದಂತೆ 7.50,000/-ರೂ ಕಿಮ್ಮತ್ತಿನ 150 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾದ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರೂ ಆರೋಪಿತರ ಪತ್ತೆಗೆ ತಂಡ ರಚಿಸಲಾಗಿದೆ
ಹೆಚ್ಚುವರಿ ಎಸ್.ಪಿ.ಮಹಾನಿಂಗ ನಂದಗಾವಿ ಬೆಳಗಾವಿ, ಡಿ.ಎಸ್.ಪಿ.ಮನೊಜಕುಮಾರ ನಾಯಿಕ ಗೋಕಾಕರವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸೆಕ್ಟರ್ ಶ್ರೀ ಎಮ್, ಎಮ್ ತಹಶೀಲ್ದಾರ ಶ್ರೀಮತಿ ಎಲ್. ಎಲ್. ಪತ್ತನ್ನವರ ಪಿ.ಎಸ್.ಐ (ಅ.ವಿ), ಶ್ರೀ ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಆರ್.ಎಮ್. ಯರಗಟ್ಟಿ ಸಿ.ಎಚ್.ಸಿ. 2409. ಮಂಜುನಾಥ.ಎಸ್.ಕಬ್ಬೂರ (ಸಿಪಿಸಿ 3042, ಶ್ರೀ ಜಿ.ಎಸ್. ಕಾಂಬಳೆ ಸಿಪಿಸಿ 3255, ಎಸ್.ಆರ್. ರಾಮದುರ್ಗ, ಸಿಪಿಸಿ: 1512, ಶ್ರೀ ಯು. ವಾಯ್ ಅರಭಾಂವಿ ಸಿಪಿಸಿ 3769, ಶ್ರೀ ಸಿ.ಪಿ.ಸಿ 277, ಎಲ್.ಬಿ. ಹಂಚಾನಟ್ಟಿ, ಡಬ್ಲ್ಯು.ಪಿ.ಸಿ 3791, ಶ್ರೀ ರಾವಸಾಹೇಬ ಬೊಮ್ಮನಾಳ, ಎಚ್.ಜಿ. 694 ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಬೆಳಗಾವಿಯ, ಎಸ್.ಪಿ ಡಾ|| ಸಂಜೀವ್ ಎಂ ಪಾಟೀಲ, ಐ.ಪಿ.ಎಸ್ ಆದ ನಾನು ಹುಕ್ಕೇರಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಇದೇ ರೀತಿ ಕರ್ತವ್ಯವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದ್ದಾರೆ.
ವರದಿ ಬ್ರಹ್ಮಾನಂದ ಪತ್ತಾರ.