ಬೆಳಗಾವಿ ನಗರದಿಂದ ಪ್ರೇಕ್ಷಣೀಯ ಸ್ಥಳ ವೀಕ್ಷಣೆಗೆ ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ : ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣ ಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಪ್ರತಿ ಎರಡನೆ & ನಾಲ್ಕನೆ ಶನಿವಾರ ಮತ್ತು ಭಾನುವಾರಗಳಂದು ಜುಲೈ 17 ರಿಂದ ಆಗಷ್ಟ್ 28 ವರೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣ ಸಲು ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದಿಂದ ನಾಗರ ತಾಸ ಜಲಧಾರೆ, ಅಂಬೋಲಿ ಜಲಧಾರೆ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬರಲು ಈ ಬಸ್ ವ್ಯವಸ್ಥೆ ಮಾಡಲಾಗಿದ್ದು ಪ್ರವಾಸಿಗರು ಈ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ ಕಾಯ್ದಿರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ 7760991612/7760991613 ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-1 ಮೊ.ಸಂ 7760991625 ರವರನ್ನು ಸಂಪರ್ಕಿಸಬಹುದು ಎಂದು ವಾಕರಸಾಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.