ಮೀಸಲಾತಿ ಬೇಡಿಕೆ ಈಡೇರುವವರೆಗೆ ಪಂಚಮಸಾಲಿ ಹೋರಾಟ ಅನಿವಾರ್ಯ: ಚನ್ನರಾಜ ಹಟ್ಟಿಹೊಳಿ

ಮೀಸಲಾತಿ ಬೇಡಿಕೆ ಈಡೇರುವವರೆಗೆ ಪಂಚಮಸಾಲಿ ಹೋರಾಟ ಅನಿವಾರ್ಯ: ಚನ್ನರಾಜ ಹಟ್ಟಿಹೊಳಿ
ಧಾರವಾಡ: ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವ ಜನತೆಯ ಉದ್ಯೋಗದ ದೃಷ್ಟಿಯಿಂದ ಮೀಸಲಾತಿ ನೀಡುವುದು ಅಗತ್ಯವಾಗಿದ್ದು ಸರಕಾರ ಇದಕ್ಕೆ ಸ್ಪಂದಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅವರು ಅಣ್ಣಿಗೇರಿ ತಾಲೂಕಿನ ಅಂಜುಮನ್ ಶಾದಿ ಮಹಲ್ ನಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಅಭಿವೃದ್ಧಿಯಲ್ಲಿ ಪಂಚಮಸಾಲಿ ಸಮುದಾಯದವರ ಪಾತ್ರ ಬಹಳಷ್ಟಿದೆ. ಆದರೆ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಮೀಸಲಾತಿ ನೀಡುವುದು ಅತ್ಯಗತ್ಯವಾಗಿದ್ದು ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಶ್ರೀಗಳ ನೇತೃತ್ವದಲ್ಲಿ ಇಡೀ ಸಮುದಾಯ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ 2ಎ ಮತ್ತು ಸರಕಾರದಲ್ಲಿ ‘ಓಬಿಸಿ ಮೀಸಲಾತಿಯ ಹೋರಾಟಕ್ಕೆ ಜಯವಾಗಲಿ’ ಎನ್ನುವ ಘೋಷಣೆಯೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿದ್ದು, ಸಮಾಜದ ಬೆಳವಣಿಗೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವ ಜನತೆಯ ಉದ್ಯೋಗಕ್ಕಾಗಿ ಮೀಸಲಾತಿಯ ಹೋರಾಟವೇ ಈ ಸಭೆಯ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಆರ್. ಕೆ. ಪಾಟೀಲ, ಸಿದ್ದನಗೌಡ ಪಾಟೀಲ, ರಾಮನಗೌಡ ಪಾಟೀಲ, ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ, ಷಣ್ಮುಖ ಗುರಕಾರ, ಮಹೇಶ ದೇಸಾಯಿ, ಚಂಬಣ್ಣ ಹಾಳದುಟರ, ಶರಣಪ್ಪಗೌಡ ದಾನಪ್ಪಗೌಡರ, ಬಸನಗೌಡ ಕುರಹಟ್ಟಿ, ಬಾಳನಗೌಡ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.