ಕುಮಟಾದ ಲಯನ್ಸ್ ಕ್ಲಬ್ ನಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ.

ಕುಮಟಾದ ಲಯನ್ಸ್ ಕ್ಲಬ್ ನಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ.
ಕುಮಟಾ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಕುಮಟಾದ,2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಸಮಾಜದ ವಿವಿಧ ಸ್ಥರಗಳಲ್ಲಿ ಗುರುತಿಸಿಕೊಂಡಿರುವ ಲಯನ್.ವಿದ್ಯಾ ಶೇಟ್ ಅಧ್ಯಕ್ಷೆಯಾಗಿ, ಖ್ಯಾತ ವೈದ್ಯರು ಹಾಗೂ ಅಂಕಣಕಾರರು ಆದ ಲಯನ್ ಡಾ.ನಾಗರಾಜ ಭಟ್ ಕಾರ್ಯದರ್ಶಿಯಾಗಿ, ಸ್ನೇಹಮಯಿ ವ್ಯಕ್ತಿತ್ವದ ಲಯನ್ ಸಪ್ನಾ ನಾಯ್ಕ ಖಜಾಂಚಿಯಾಗಿ ಈ ವರ್ಷ ಕರ್ತವ್ಯ ನಿರ್ವಹಿಸಲಿದ್ದಾರೆ.
ಪದಗ್ರಹಣ ಭೋಧಕರಾಗಿ ಪಿ.ಎಂ.ಜೆ.ಎಫ್ ಲಯನ್ ಶಶಿಂದ್ರನ್ ನಾಯರ್, ಮುಖ್ಯ ಅತಿಥಿಗಳಾಗಿ ಎಂ.ಜೇ. ಎಪ್, ಲಯನ್ ಎನ್ ಕೆ ಕಾಕುಂಡ್ಕರ, ಗೌರವ ಅತಿಥಿಯಾಗಿ ಪಿ.ಎಂ. ಜೇ. ಎಫ್ ಲಯನ್ ಡಾ. ಗಿರೀಶ್ ಕೂಚಿನಾಡ ಭಾಗವಹಿಸಿದ್ದರು.
ಇನ್ನುಳಿದಂತೆ ಲಯನ್ಸ್ ಕ್ಲಬ್ ಕುಮಟಾದ ಸದಸ್ಯರು,ನಿರ್ದೇಶಕರು, ನಿಕಟಪೂರ್ವ ಹಾಗೂ ಪೂರ್ವ ಅಧ್ಯಕ್ಷ-ಕಾರ್ಯದರ್ಶಿ- ಖಜಾಂಚಿಗಳು, ಸಮಾಜದ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆ ನಡೆಸಿದ ಹೊಲಿಗೆ ತರಭೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಾಗೆ ಕುಮಟಾ ಲಯನ್ಸ್ ಕ್ಲಬ್ ಗೆ ವಿವಿಧ ಸ್ತರಗಳಲ್ಲಿ ಲಭಿಸಿದ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಅತಿಥಿಗಳಿಂದ ನೀಡಲ್ಪಟ್ಟಿತು.