Crime NewsKarnataka News
SHOCKING NEWS: ಮೊಬೈಲ್ ನಲ್ಲಿ ಮಾತನಾಡಿದ್ದೆ ಅನುಮಾನ; ಹೆಂಡತಿಯನ್ನೇ ಕೊಂದ ಗಂಡ

ಬೆಂಗಳೂರು: ಪತ್ನಿ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪತಿ ಮಹಾಶಯನೊಬ್ಬ ಅನುಮಾನದಿಂದ ಹೆಂಡತಿಯನ್ನೇ ಬರ್ಬರವಾಗಿ ಕೊಂದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.
25 ವರ್ಷದ ಪ್ರೇಮ ಕೊಲೆಯಾದ ಮಹಿಳೆ.
ವೆಂಕಟೇಶಾಚಾರಿ ಹಾಗೂ ಪ್ರೇಮ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ 7 ವರ್ಷದ ಮಗಳಿದ್ದಾಳೆ. ಆದರೂ ಪತ್ನಿಯ ಮೇಲೆ ಪತಿ ಮಹಾಶಯನಿಗೆ ಅನುಮಾನ.
ಪತ್ನಿ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನೇ ನೆಪ ಮಾಡಿಕೊಂಡ ವೆಂಕಟೇಶಾಚಾರಿ, ಅನುಮಾನದಿಂದ ಪತ್ನಿಯನ್ನು ಕೊಲೆಗೈದಿದ್ದಾನೆ. ರಾತ್ರಿ ಮಲಗಿದ್ದ ಪತ್ನಿಯ ಕತ್ತು ಹಾಗೂ ಕೈಗಳನ್ನು ಮಚ್ಚಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.