PSI Recruitment Scam: ಎಡಿಜಿಪಿ ಅಮೃತ್ ಪೌಲ್ ಆಸ್ತಿ ಎಲ್ಲೆಲ್ಲಿದೆ? ಯಾರ ಹೆಸರಿನಲ್ಲಿದೆ?

ಅಮೃತ್ ಪೌಲ್ ಆಸ್ತಿ ಎಲ್ಲೆಲ್ಲಿದೆ..?
1.ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯಾ ಗ್ರಾಮದಲ್ಲಿ ಸರ್ವೆ ನಂಬರ್ 247 ರಲ್ಲಿ 4 ಎಕರೆಯ ಜಾಗದಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ಇದು ತಂದೆ ನೇತಾರಾಮ್ ಬನ್ಸಾಲ್ ಅವರ ಹೆಸರಿನಲ್ಲಿದೆ.
2.ಫಾರ್ಮ್ ಹೌಸ್ ಸುತ್ತಮುತ್ತಲಿನ 8 ಎಕರೆ ಜಮೀನನ್ನ ಕೂಡ ಪೌಲ್ ಇತ್ತೀಚಿಗೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
3.ಇನ್ನು ಶಿಡ್ಲಘಟ್ಟದ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು ತಂದೆ ನೇತಾರಾಮ್ ಹೆಸರಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ.
4.ನೆಲಪ್ಪನಹಳ್ಳಿ ಸರ್ವೆ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗ.
5.ನೆಲಪ್ಪನಹಳ್ಳಿಯಲ್ಲೇ ಸರ್ವೆ ನಂಬರ್ 3 ಎಕರೆ 30 ಗುಂಟೆ ಜಾಗ ಪೌಲ್ ತಂದೆ ಹೆಸರಲ್ಲಿದೆ.
ಇದೀಗ ಸಿಐಡಿಯ ತಂಡ ಪೌಲ್ ಅವರರ ಎಲ್ಲಾ ಆಸ್ತಿ ಪಾಸ್ತಿಯ ವಿವರಗಳನ್ನ ಪಡೆದುಕೊಳ್ಳುತ್ತಿದೆ. ಈ ಬಗ್ಗೆಯೂ ತನಿಖೆಯ ಚುರುಕುಗೊಳಿಸಿದೆ. ಚಾರ್ಜ್ ಶೀಟ್ ನಲ್ಲೂ ಅಕ್ರಮ ಆಸ್ತಿಯ ವಿವರಗಳನ್ನ ದಾಖಲಿಸಲು ಸಿಐಡಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಅಮೃತ್ ಪೌಲ್ಗೆ ನ್ಯಾಯಾಂಗ ಬಂಧನ
ಅಮೃತ್ ಪೌಲ್ (Amrit Paul) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಐಡಿ ಕಸ್ಟಡಿ (Custody of CID) ಅಂತ್ಯ ಹಿನ್ನೆಲೆ ಇಂದು ಎಡಿಜಿಪಿ ಅಮೃತ್ ಪೌಲ್ ಅವರನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಲಯ ಅಮೃತ್ ಪೌಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ನಾಳೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ (Court) ಸೂಚನೆ ನೀಡಿದೆ.
ಸಿಐಡಿ ಕಸ್ಟಡಿ ಅಂತ್ಯ ಹಿನ್ನಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಒಂದನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ಹಾಜರು ಪಡಿಸಲಾಗಿತ್ತು. ಅಮೃತ್ ಪೌಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನ್ಯಾಯಾಲಯದ ಸೂಚನೆಯಂತೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಅಮೃತ್ ಪೌಲ್ ಕುಟುಂಬಸ್ಥರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ರು.
ಮಂಪರು ಪರೀಕ್ಷೆಗೆ ಅನುಮತಿ ಕೇಳಿದ ಸಿಐಡಿ
ಕೋರ್ಟ್ ವಿಚಾರಣೆ ವೇಳೆ ಅಮೃತ್ ಪೌಲ್ ಅವರಿಗೆ ಮಂಪರು ಪರೀಕ್ಷೆ ನಡೆಸಲು ಸಿಐಡಿ ಪರ ವಕೀಲರು ಅನುಮತಿ ಕೇಳಿದ್ರು. ಜೊತೆಗೆ ಫಾಲಿಗ್ರಾಪ್ ಟೆಸ್ಟ್ ಮಾಡಿಸಲು ನ್ಯಾಯಾಲಯದ ಅನುಮತಿ ಕೇಳಲಾಗಿದೆ. ನಾಳೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ ಸೂಚನೆ ನೀಡಿದೆ. ಪಿಎಸ್‌ಐ ಪ್ರಕರಣದ ಸ್ಪೆಷಲ್ ಪಿಪಿಯಾಗಿ ಪ್ರಸನ್ನ ಕುಮಾರ್ ನೇಮಕ ಅವರನ್ನು ನೇಮಕ ಮಾಡಲಾಗಿದೆ
20ಕ್ಕಿಂತ ಹೆಚ್ಚು ಆರೋಪಿಗಳ ಬಂಧನ
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ (PSI Scam) ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ ಪೊಲೀಸರು (CID Police) ಬಂಧಿಸಿದ್ದರು. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು.
ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಾಗೂ ಅಭ್ಯರ್ಥಿಗಳು ಸೇರಿದಂತೆ ಸಿಐಡಿ ಬೆಂಗಳೂರು ವಿಭಾಗದ ಅಧಿಕಾರಿಗಳು 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು.