BIGG NEWS: ‘ವಾಹನ ಸವಾರ’ರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ‘ಅನಾವಶ್ಯಕ ವಾಹನ ತಪಾಸಣೆ’ ನಿಲ್ಲಿಸುವಂತೆ ಡಿಜಿಪಿ ಖಡಕ್ ಆದೇಶ

ಬೆಂಗಳೂರು: ರಾಜ್ಯದ ಹೆದ್ದಾರಿ ಸೇರಿದಂತೆ ವಿವಿಧ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸುತ್ತಿದ್ದರು. ಇದರಿಂದ ಅನೇಕ ವಾಹನ ಸವಾರರಿಗೆ ಕಿರಿಕಿರಿ ಕೂಡ ಉಂಟಾಗುತ್ತಿತ್ತು.
ಈ ಕಿರಿಕಿರಿ ತಪ್ಪಿಸೋ ನಿಟ್ಟಿನಲ್ಲಿ, ಈ ಕೂಡಲೇ ರಾಜ್ಯಾಧ್ಯಂತ ಅನಾವಶ್ಯಕ ವಾಹನ ತಪಾಸಣೆ ನಿಲ್ಲಿಸುವಂತೆ ಎಲ್ಲಾ ಎಸ್ಪಿಗಳಿಗೆ ಡಿಜಿಪಿ ಖಡಕ್ ಆದೇಶದಲ್ಲಿ ಸೂಚಿಸಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನಡೆಸಲಾಗುತ್ತಿದೆ. ಆರ್ ಸಿ, ಫಿಟ್ನೆಸ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಾ ಪೊಲೀಸರ ಕಿರಿಕಿರಿ ಉಂಟುಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ವಾಹನಗಳ ಬಗ್ಗೆ ಅನುಮಾನವಿದ್ದಾಗ, ಡ್ರಿಂಕ್ ಅಂಡ್ ಡ್ರೈವ್ ಸಂಬಂಧದ ಪ್ರಕರಣದಲ್ಲಿ ವಾಹನಗಳ ತಪಾಸಣೆಯನ್ನು ಇನ್ಮುಂದೆ ನಡೆಸುವುದು. ಹೆದ್ದಾರಿಗಳು ಸೇರಿದಂತೆ ಯಾವುದೇ ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ತಡೆದು ನಿಲ್ಲಿಸಕೂಡದು ಎಂಬುದಾಗಿ ಪೊಲೀಸರಿಗೆ ಖಡಕ್ ಆಗಿ ಸೂಚಿಸಿದ್ದಾರೆ.