Feature articlesKarnataka NewsPolitics
ಯಮಕನಮರಡಿ ಮತಕ್ಷೇತ್ರದ ಕೇದನೂರ ಮತ್ತು ಮಣ್ಣಿಕೇರಿ ಗ್ರಾಮಗಳ ಸಂತ್ರಸ್ತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ನೆರವಿನ ಹಸ್ತ

ಮಹಾಮಳೆಯಿಂದ ಕುಸಿದು ಬಿದ್ದಿರುವ ಯಮಕನಮರಡಿ ಮತಕ್ಷೇತ್ರದ ಕೇದನೂರ ಮತ್ತು ಮಣ್ಣಿಕೇರಿ ಗ್ರಾಮಗಳ ಸಂತ್ರಸ್ತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ನೆರವಿನ ಹಸ್ತ ಚಾಚಿದೆ.
ಹೌದು ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಾಕಷ್ಟು ಮನೆಗಳು ಧರೆಗೆ ಉರುಳಿದ್ರೆ, ಹೊಲದಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತವಾಗಿ ಹಾನಿಯಾಗಿವೆ.
ಹೀಗೆ ಬೆಳಗಾವಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕೇದನೂರ ಮತ್ತು ಮಣ್ಣಿಕೇರಿ ಗ್ರಾಮದಲ್ಲಿ ಪ್ರಕಾಶ ರಾಮಚಂದ್ರ, ಶಾಂತಾ ಯಲ್ಲಪ್ಪ ವರ್ಗೆ, ರೇಖಾ ಬಾಳು ರಾಜಾಯಿ, ಮಲ್ಲವ್ವ ಮಲ್ಲಪ್ಪ ಪಾಟೀಲ್, ಪ್ರಭು ದೇವನು ರಾಜಾಯಿ ಹಾಗೂ ಕಲ್ಪನಾ ಶಟ್ಟು ಪಾಟೀಲ್ ಅವರ ಮನೆಗಳು ಮಳೆಯಿಂದ ಬಿದ್ದಿವೆ.
ಹೀಗಾಗಿ ಇವರ ಮನೆಗಳಿಗೆ ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಭೇಟಿ ನೀಡಿದ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್ ಅವರು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿಗಳನ್ನು ವಿತರಿಸಿ, ಸಾಂತ್ವನ ಹೇಳಿದರು.