Karnataka News
ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಆಟೋ ಚಾಲಕ

ತುಮಕೂರು: ಮಳೆ ನೀರಿನಲ್ಲಿ ಆಟೋಚಾಲಕನೊಬ್ಬ ಕೊಚ್ಚಿಕೊಂಡು ಹೋದಂಥ ಪ್ರಕರಣವೊಂದು ನಡೆದಿದ್ದು, ಆಟೋ ಪತ್ತೆಯಾಗಿದೆ. ಚಾಲಕನಿಗಾಗಿ ಹುಡುಕಾಟ ಮುಂದುವರಿದಿದೆ. ತುಮಕೂರು ಜಿಲ್ಲೆಯಲ್ಲಿ ಈ ಅವಘಡ ಉಂಟಾಗಿದೆ.
ತುಮಕೂರು ನಗರದ ರಿಂಗ್ ರಸ್ತೆಯ ಧಾನ್ಹಾ ಪ್ಯಾಲೇಸ್ ಸಮೀಪ ಇಂದು ಈ ಘಟನೆ ನಡೆದಿದೆ.
ಮರಳೂರು ದಿಣ್ಣೆ ನಿವಾಸಿ, ಆಟೋಚಾಲಕ ಅಮ್ಜದ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಆಟೋದಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ರಿಂಗ್ ರಸ್ತೆಯ ಧಾನ್ಹಾ ಪ್ಯಾಲೇಸ್ ಕಡೆಯಿಂದ ಗುಬ್ಬಿಗೇಟ್ ಕಡೆ ಅಮ್ಜದ್ ಸಾಗುತ್ತಿದ್ದು, ಈತನ ಆಟೋ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬಂದು ಶೋಧ ಕಾರ್ಯಾಚರಣೆ ನಡೆಸಿದೆ. ಅದಾಗ್ಯೂ ಅಮ್ಜದ್ ಪತ್ತೆ ಆಗಿಲ್ಲ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.