InternationalKarnataka NewsNational
ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯೆಬ್ಬಿಸಿದ ಡೇಟಿಂಗ್ ಪ್ರಕರಣ: ಲಲಿತ್ ಮೋದಿ ಜೊತೆ ಡೇಟಿಂಗ್; ಸುಷ್ಮತಾ ಸೇನ್ ತಂದೆ ಹೇಳಿದ್ದೇನು?

ಮುಂಬೈ: ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ಪ್ರಕರಣದ ಮೂಲಕ ಪ್ರಸ್ತುತ ಭಾರೀ ಪ್ರಚಲಿತದಲ್ಲಿರುವ ಬಾಲಿವುಡ್ ನಟಿ ಸುಷ್ಮತಾ ಸೇನ್ ತಂದ ಇದೀಗ ಮಗಳ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
“ನಾನು ಅವಳೊಂದಿಗೆ ಶುಕ್ರವಾರವಷ್ಟೇ ಫೋನ್ ನಲ್ಲಿ ಮಾತನಾಡಿದ್ದೇನೆ. ಆಕೆ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುವ ವಿಷಯ ನನಗೆ ಹೇಳಿರಲಿಲ್ಲ. ಸೋಷಿಯಲ್ ಮೀಡಿಯಾದಿಂದಲೇ ಲಲಿತ್ ಮೋದಿ ಟ್ವಿಟ್ ನಂತರ ಮಾಧ್ಯಮದವರು ಪ್ರಶ್ನಿಸಿದಾಗಲೇ ನನಗೂ ವಿಷಯ ತಿಳಿದಿದ” ಎಂದು ಸುಷ್ಮತಾ ತಂದೆ ಶುಬೀರ್ ಸೇನ್ ಹೇಳಿಕೊಂಡಿದ್ದಾರೆ.
“ಸದ್ಯ ಸುಷ್ಮತಾ ಲಂಡನ್ ನಲ್ಲಿ ಅವರ ಮಿತ್ರರೊಂದಿಗೆ ವಿಹರಿಸಲು ಹೋಗಿದ್ದು ಆಕೆ ಕುಟುಂಬದವರೊಂದಿಗೆ ಆ ವಿಷಯ ಮಾತನಾಡಿಲ್ಲ. ಲಲಿತ್ ಅವರನ್ನು ಅಳಿಯ ಎಂದು ಒಪ್ಪಿಕೊಂಡ ನಂತರವೇ ಪ್ರತಿಕ್ರಿಯಿಸುವ” ಎಂದು ಶುಬೀರ್ ಸೇನ್ ಹೇಳಿದ್ದಾರೆ.