All Categories AdvertisementEducationFeature articlesKarnataka NewsMake MoneyNationalStories
Shilpa Shetty: ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿಸಿದ ಶಿಲ್ಪಾ ಶೆಟ್ಟಿ: ಏನೇನಿದೆ ಇದರ ಒಳಗಡೆ?

ಬಾಲಿವುಡ್ (Bollywood) ನಟ – ನಟಿಯರ ಲೈಫ್ ಸ್ಟೈಲ್ ವಿಷಯಗಳು ಅಭಿಮಾನಿಗಳಿಗೆ ಸದಾ ಕುತೂಹಲಕಾರಿಯಾಗಿರುತ್ತದೆ. ನಟ – ನಟಿಯರ ಕಾರುಗಳು, ಬಟ್ಟೆಗಳು, ಬಂಗಲೆಗಳು, ಆಭರಣಗಳು ಹೀಗೆ ಹಲವಾರು ವಿಷಯಗಳು ಸದಾ ಚರ್ಚೆಯಲ್ಲಿರುತ್ತವೆ. ಇದರಲ್ಲಿ ಸೆಲಬ್ರಿಟಿಗಳ ವ್ಯಾನಿಟಿ ವ್ಯಾನ್ (Vanity Van) ಅಥವಾ ಕ್ಯಾರವಾನ್ (Caravan) ಸಹ ಒಂದು ಪ್ರಮುಖ ವಿಷಯವಾಗಿದೆ.
ಈ ಸೆಲೆಬ್ರಿಟಿ ವ್ಯಾನಿಟಿಗಳು ಐಷಾರಾಮಿ ಫ್ಲಾಟ್ ಇದ್ದಂತೆ ಇರುತ್ತದೆ. ಒಂದು ಕ್ಯಾರವಾನ್ ಒಳಗೆ ಬಾತ್ರೂಂ, ಬೆಡ್ ರೂಂ, ಅಡಿಗೆ ಮನೆ, ಹಾಲ್ ಹೀಗೆ ಎಲ್ಲವೂ ಇರುತ್ತದೆ. ಅದೇ ರೀತಿ ಐಷಾರಾಮಿ ಕ್ಯಾರವಾನ್ ಹೊಂದಿರುವ ನಟಿಯ ಬಗ್ಗೆ ಇದೀಗ ಎಲ್ಲಡೆ ಸಖತ್ ಚರ್ಚೆಯಾಗುತ್ತಿದೆ. ಹೌದು, ಬಾಲಿವುಡ್ನ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಇತ್ತೀಚೆಗೆ ಹೊಸ ವ್ಯಾನಿಟಿ ವ್ಯಾನ್ ಅನ್ನು ಖರೀದಿಸಿದ್ದಾರೆ. ಸದ್ಯ ಈ ವ್ಯಾನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಇದೇನು ಕ್ಯಾರವಾನ್ ಅಥವಾ 5 ಸ್ಟಾರ್ ಹೋಟೆಲ್ ರೂಂ ಆಗಿದೆಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿಸಿದ ಶಿಲ್ಪಾ ಶೆಟ್ಟಿ:
ಹೌದು, ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಇಂದಿಗೂ ತನ್ನ ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ ಅವರ ಯೋಗದ ವಿಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇದೀಗ ಶಿಲ್ಪಾ ಶೆಟ್ಟಿ ಹೊಸ ವ್ಯಾನಿಟಿ ವ್ಯಾನ್ ಖರೀದಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.