Curd Price: ಮೊಸರು-ಮಜ್ಜಿಗೆ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; KMFನಿಂದ ನೂತನ ದರ ಜಾರಿ

ನೂತನ ದರ
ಇಂದಿನ ದರದಲ್ಲಿ ಕೊಂಚ ದರ ಕಡಿಮೆ ಮಾಡಿದ KMF
ಮೊಸರು 200 ಎಂಎಲ್
ನಿನ್ನೆ- 10 ರೂಪಾಯಿ ಇಂದು , 12 ರೂಪಾಯಿ, ನಾಳೆಯಿಂದ – 10.50 ಪೈಸೆ
ಮೊಸರು 500 ಎಂಎಲ್
ನಿನ್ನೆ- 22 ರೂಪಾಯಿ, ಇಂದು – 24 ರೂಪಾಯಿ, ನಾಳೆಯಿಂದ- 23 ರುಪಾಯಿ
ಒಂದು ಲೀಟರ್ ಮೊಸರು
ನಿನ್ನೆ 43 ರೂಪಾಯಿ, ಇಂದು- 46 ರೂಪಾಯಿ, ನಾಳೆಯಿಂದ- 45 ರುಪಾಯಿ
ಮಜ್ಜಿಗೆ 200 ಎಂಎಲ್
ನಿನ್ನೆ- 7 ರೂಪಾಯಿ, ಇಂದು 8 ರೂಪಾಯಿ, ನಾಳೆಯಿಂದ- 7.50 ಪೈಸೆ
ಲಸ್ಸಿ 200 ಎಂಎಲ್
ನಿನ್ನೆ- 10 ರುಪಾಯಿ, ಇಂದು 11 ರುಪಾಯಿ, ನಾಳೆಯಿಂದ – 10.50 ಪೈಸೆ ಇರಲಿದೆ ಎಂದು KMF ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ನಂದಿನಿ ಹಾಲಿನ ಬೆಲೆ ಏರಿಕೆಗೂ ಪ್ಲಾನ್
ಇನ್ನು ನಂದಿನಿ ಹಾಲಿನ ಬೆಲೆಯನ್ನೂ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಗುರುವಾರ ನಡೆದ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಂಎಫ್ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದರೆ, ಪ್ರಸ್ತುತ 37 ರೂ.ಗಳಲ್ಲಿರುವ ಒಂದು ಲೀಟರ್ ನಂದಿನಿ ಟೋನ್ಡ್ ಹಾಲು (ಬ್ಲೂ ಸ್ಯಾಚೆಟ್) 40 ರೂ.ಗೆ ಏರಬಹುದು. ಕೆಎಂಎಫ್ ಪ್ರಕಾರ, ರೈತರಿಗೆ 2.5 ರೂ ಹೆಚ್ಚುವರಿ ಸಿಗುತ್ತದೆ. ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಮಾರಾಟ ಮಾಡುವ ಪ್ರತಿ ಲೀಟರ್ ಹಾಲಿನಿಂದ 50 ಪೈಸೆಯನ್ನು ಒಕ್ಕೂಟಗಳು ಉಳಿಸಿಕೊಳ್ಳುತ್ತವೆ.
ಹಾಲಿನ ಬೆಲೆ ಏರಿಕೆಗೆ ಪ್ರಸ್ತಾವನೆ
KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾವು ಲೀಟರ್ ನಂದಿನಿ ಹಾಲನ್ನು 37 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಕರ್ನಾಟಕದ ಎಲ್ಲಾ ಹಾಲು ಒಕ್ಕೂಟಗಳು ಬೆಲೆಯಲ್ಲಿ ಪರಿಷ್ಕರಣೆಗಾಗಿ ಸರ್ವಾನುಮತದಿಂದ ಕೋರಿವೆ; ಆದ್ದರಿಂದ ನಾವು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಷ್ಕೃತ ದರಕ್ಕೆ ಅನುಮೋದನೆ ಪಡೆಯುತ್ತೇವೆ ಎಂದು ಹೇಳಿದರು.
ಕಳೆದ ತಿಂಗಳು ನಡೆದ ಚಳಿಗಾಲದ ಅಧಿವೇಶನದ ವೇಳೆ ಕೆಎಂಎಫ್ ನಿಯೋಗ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಹಾಲಿನ ದರ ಏರಿಕೆ ಮಾಡುವಂತೆ ಮನವಿ ಮಾಡಿತ್ತು.
ನಿನ್ನೆ ಬೆಲೆ ಏರಿಕೆ ಮಾಡಿ ಅಧಿಕೃತ ಪ್ರಕಟನೆ ಹೊರಡಿಸಿದ್ದ KMF
ಕೇಂದ್ರ ವಿತ್ತ ಸಚಿವಾಲಯದ ಅಧಿಸೂಚನೆ ಅನ್ವಯ ಮೊಸರು, ಮಜ್ಜಿಗೆ ಹಾಗೂ ಲಸ್ಸಿಗಳ ಮೇಲೆ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಎರಡರಿಂದ ಮೂರು ರೂಪಾಯಿಯಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿತ್ತು. ಬೆಲೆ ಏರಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿದೆ.