fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentFeature articlesLatestMake MoneyScienceStories

ಐಕ್ಯೂಯಿಂದ ದಿಢೀರ್ ನಿಯೋ 6 5G ಹೊಸ ವೇರಿಯೆಂಟ್ ಲಾಂಚ್: ಬೆಲೆ ಎಷ್ಟು?, ಏನು ವಿಶೇಷತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಇದೀಗ ಮತ್ತೊಂದು ಹೊಸ ಮೆವರಿಕ್ ಆರೆಂಜ್ ಬಣ್ಣದಲ್ಲಿ ಐಕ್ಯೂ ನಿಯೋ 6 5G ಬಿಡುಗಡೆ ಆಗಿದೆ. ಇದು 12GB RAM ಮತ್ತು 256GB ಸ್ಟೋರೇಜ್ ಹೊಂದಿದ್ದು, ಇದರ ಬೆಲೆ 33,999 ರೂ. ಆಗಿದೆ.ಈಗಂತು ಮಾರುಕಟ್ಟೆಗೆ ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್​​ಫೋನ್​ಗಳು (Smartphone) ಲಗ್ಗೆಯಿಡುತ್ತವೆ.

ಪ್ರತಿ ಫೋನ್​ನಲ್ಲೂ ತನ್ನದೇ ಆದ ವಿಶೇಷ ಫೀಚರ್​ಗಳು ಒಳಗೊಂಡಿರುತ್ತವೆ. ಇವುಗಳ ನಡುವೆ ವಿಭಿನ್ನವಾಗಿ ನಿಲ್ಲುವುದುಐಕ್ಯೂ(iQoo) ಕಂಪನಿ. ಅತ್ಯುತ್ತಮ ಫೀಚರ್​ಗಳ ಜೊತೆ ಸ್ಟೈಲಿಶ್ ಸ್ಮಾರ್ಟ್​​ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಈ ಬ್ರ್ಯಾಂಡ್ ಕಳೆದ ಮಾರ್ಚ್​​ನಲ್ಲಿ ತನ್ನ ಐಕ್ಯೂ ನಿಯೋ 6 5G (iQoo Neo 6) ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿತ್ತು. ಇದಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿಬಂದಿದೆ.

ಈ ಫೋನ್ ದೇಶದಲ್ಲಿ ಸೈಬರ್ ರೇಜ್ ಮತ್ತು ಡಾರ್ಕ್ ನೋವಾ ಕಲರ್​ನಲ್ಲಿ ಅನಾವರಣಗೊಂಡಿತ್ತು. ಇದೀಗ ಮತ್ತೊಂದು ಹೊಸ ಮೆವರಿಕ್ ಆರೆಂಜ್ ಬಣ್ಣದಲ್ಲಿ ಐಕ್ಯೂ ನಿಯೋ 6 5G ಬಿಡುಗಡೆ ಆಗಿದೆ. ಇದು 12GB RAM ಮತ್ತು 256GB ಸ್ಟೋರೇಜ್ ಹೊಂದಿದ್ದು, ಇದರ ಬೆಲೆ 33,999 ರೂ. ಆಗಿದೆ.

ಅಮೆಜಾನ್​ನಲ್ಲಿ ಜುಲೈ 23 ರಿಂದ ಖರೀದಿಗೆ ಸಿಗಲಿದೆ.

  1. ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಈ ಹಿಂದೆ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಇದರ 8GB RAM ಮತ್ತು 128GB ಮಾದರಿಯ ಆಯ್ಕೆಗೆ 29,999 ರೂ. ಜೊತೆಗೆ ಟಾಪ್-ಎಂಡ್ 12GB RAM ಮತ್ತು 256GB ಆಯ್ಕೆಗೆ 33,999 ರೂ. ಇದೆ.
  2. ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.
  3. ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದೆ.

    ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

  4. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL ಪ್ಲಸ್‌ GW1P ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ.
  5. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
  6. ದೀರ್ಘ ಸಮಯ ಬಾಳಿಕೆ ಬರುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
  7. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: