Karnataka News
ಚರಂಡಿಗೆ ಇಳಿದ ಕೆಎಸ್‍ಆರ್‍ಟಿಸಿ ಬಸ್

ಖಾನಾಪುರದಿಂದ ಕುಂಬಾರ್ಡಾಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಪಡಲವಾಡಿ ತಿರುವಿನ ಬಳಿ ಇರುವ ಮರವನ್ನು ತಪ್ಪಿಸಲು ಹೋಗಿ ಪಕ್ಕದ ಚರಂಡಿಯಲ್ಲಿ ಇಳಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಈ ರಸ್ತೆಯ ತಿರುವಿನಲ್ಲಿ ಒಂದು ಮರ ಬರುತ್ತದೆ. ಈ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಬಸ್‍ನ್ನು ಚರಂಡಿಗೆ ಇಳಿಸಿದ್ದಾರೆ. ಅದೃಷ್ಟವಶಾತ್ ಬಸ್‍ನಲ್ಲಿದ್ದ ಯಾರಿಗೂ ಯಾವುದೇ ರೀತಿ ಗಾಯ ಆಗಿಲ್ಲ. ಬಳಿಕ ಎಲ್ಲ ಪ್ರಯಾಣಿಕರು ಬೇರೆ ವ್ಯವಸ್ಥೆ ಮಾಡಿಕೊಂಡು ಅಬ್ಬಾ ಬದುಕಿತು ಜೀವ ಎಂದು ಮನೆ ಸೇರಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಕ್ರೇನ್ ಮೂಲಕ ಬಸ್‍ನ್ನು ಮೇಲಕ್ಕೆ ಎತ್ತಲಾಗಿದೆ.
ಈ ರೀತಿ ಪದೇ ಪದೇ ಘಟನೆಗಳು ಸಂಭವಿಸುತ್ತಿದ್ದು, ಈ ರೀತಿ ಅವಘಡ ಸಂಭವಿಸಿದಂತೆ ವ್ಯವಸ್ಥೆ ಮಾಡುವಂತೆ ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.