Karnataka NewsPolitics
ಜಾತ್ರಾ ಮಹೋತ್ಸವಗಳು ಏಕತೆ, ಸಾಮರಸ್ಯದ ಕುರುಹುಗಳು: ಲಕ್ಷ್ಮೀ ಹೆಬ್ಬಾಳಕರ

ಜಾತ್ರಾ ಮಹೋತ್ಸವಗಳು ಏಕತೆ, ಸಾಮರಸ್ಯದ ಕುರುಹುಗಳು: ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ಜಾತ್ರಾ ಮಹೋತ್ಸವಗಳು, ಏಕತೆ, ಸಾಮರಸ್ಯದ ಕುರುಹುಗಳು. ಇಂಥ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸಾಹ, ಮನಶಾಂತಿ ಲಭಿಸುವುದಲ್ಲದೆ ಸಮಾಜ ಸುಭದ್ರವಾಗಲು ಸಹಕಾರಿಯಾಗುತ್ತದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಕೆ.ಎಚ್. ಗ್ರಾಮದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಕಾಳಿಕಾ ದೇವಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕಲ್ಲಪ್ಪ ಪಾಟೀಲ, ಬಾಳು ಗಿರಿಯಾಲ್ಕರ್, ಪ್ರಕಾಶ ಪಾಟೀಲ, ಸಿದ್ರಾಯ ಪಾಟೀಲ, ಯಲ್ಲಪ್ಪ ಕುರುಬರ, ಮಹಾಂತೇಶ, ಮಹಾಂತೇಶ ಬಸ್ಸಾಪುರಿ, ಮಹೇಶ ಪಾಟೀಲ, ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.