ಬೆಳಗಾವಿಯಲ್ಲಿ ಸದ್ದು ಮಾಡುತ್ತಿದೆ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ

ಬೆಳಗಾವಿ/ಬೆಂಗಳೂರು, ಜು.19: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಹರಡಿರುವ ಈ ಪ್ರಕರಣದಲ್ಲಿ ಯುವ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ಯುವತಿ ಹೆಸರು ತಳಕು ಹಾಕಿಕೊಂಡಿದ್ದು, ನೊಂದ ವ್ಯಕ್ತಿ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಗೆ ಆದ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪ್ರಸ್ತುತ ಚನ್ನಪಟ್ಟಣದಲ್ಲಿ ಪ್ರಭಾವಿ ಯುವ ಕಾಂಗ್ರೆಸ್ ನಾಯಕಿಯಾಗಿರುವ ಆಕೆ ಘಟಾನುಘಟಿ ನಾಯಕಿಯರೊಂದಿಗೆ ಕಾಣಿಸಿಕೊಂಡಿರುವ ಮತ್ತು ದೂರು ದಾರನ ಜೊತೆ ಇದ್ದ ಫೋಟೋಗಳು ವೈರಲ್ ಆಗಿದ್ದು ಭಾರೀ ಕುತೂಹಲ ಕೆರಳಿಸಿದೆ.
ಈಕೆಯ ಜಾಲದಲ್ಲಿ ಹಲವು ರಾಜಕೀಯ ಮುಖಂಡರು ಕೂಡ ಸಿಲುಕಿಕೊಂಡಿದ್ದಾರೆ ಎಂಬ ಗುಸುಗುಸು ಕೇಳಿ ಬಂದಿದ್ದು ಪ್ರಸ್ತುತ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.
ಈ ಹಿಂದೆ ಶ್ರೀಮಂತ್ ಪಾಟೀಲ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಆಪ್ತ ಸಹಾಯಕನಾಗಿದ್ದ ರಾಜ್‍ಕುಮಾರ್ ಟಕಾಳೆ ಅವರು, ಚಿತ್ರಹಿಂಸೆ ನೀಡಿದ ಕಾಂಗ್ರೆಸ್‍ನ ನಾಯಕಿ ನವ್ಯಶ್ರೀ ಹಾಗೂ ಆಕೆಯ ಪ್ರಿಯಕರ ತಿಲಕ್ ರಾಜ್
ವಿರುದ್ಧ ದೂರು ನೀಡಿದ್ದಾರೆ. ಬಗ್ಗೆ ಎಫ್‍ಐಆರ್ ಕೂಡ ದಾಖಲಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ಅಕಾರಿಯಾಗಿರುವ ರಾಜ್‍ಕುಮಾರ್ ಟಕಾಳೆ ಅವರು ಈ ಹಿಂದೆ ಸಚಿವರ ಆಪ್ತ
ಕಾರ್ಯದರ್ಶಿ ಆಗಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ನವ್ಯಶ್ರೀ ನನ್ನೊಂದಿಗೆ ಸಲಗೆ ಬೆಳೆಸಿದ್ದರು. ಈಕೆಯ ಪ್ರಿಯಕರ ತಿಲಕ್ ರಾಜ್‍ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರನ್ನು
ತೊರೆದು ಈಗ ನವ್ಯಶ್ರೀ ಯೊಂದಿಗೆ ಸೇರಿ ನನಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದು, ಮಾನಸಿಕ ಕಿರುಕುಳ
ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನಗೆ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ಸಹ ಪ್ರೀತಿ-ಪ್ರೇಮ ಎಂದು ನನ್ನ ಜೊತೆ ಸಲಗೆ ಬೆಳೆಸಿದ್ದರು. ಹಲವು ಖಾಸಗಿ ಸನ್ನಿವೇಶಗಳನ್ನು ಚಿತ್ರೀಕರಿಸಿ, ನಂತರ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನೀಡದಿದ್ದರೆ ನಿನ್ನ ಹೆಂಡತಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸುಳ್ಳು ಕೇಸ್ ದಾಖಲಿಸಿ, ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ ನನÀ್ನ ಮನೆಗೆ ಬಂದು ಹಣ ವಸೂಲಿ ಕೂಡ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಭಾರತದಲ್ಲೇ ಇರ್ಲಿಲ್ಲ: ನಾನು ಇಂಡಿಯಾದಲ್ಲೇ ಇರ್ಲಿಲ್ಲ, 15 ದಿನ ವಿದೇಶದಲ್ಲಿದ್ದೆ. ಇಂದು ತಾನೇ ಬಂದಿದ್ದೇನೆ. ನನಗೆ ಏನು ಗೊತ್ತಾಗುತ್ತಿಲ್ಲ ಎಂದು ನವ್ಯಶ್ರೀ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಕಮೀಷನರ್ ಭೇಟಿಯಾಗಿ ದೂರುನೀಡುತ್ತೇನೆ ಎಂದು ಹೇಳಿದ್ದಾರೆ.
ಇಲ್ಲಿ ವರೆಗೂ ಪೊಲೀಸರು ನನಗೆ ಪೋನ್ ಮಾಡಿಲ್ಲ. ಆ ರೀತಿಯ ಕಂಪ್ಲೇಟ್ ಕಾಪಿ ಪಡೆದು ಎಲ್ಲಾ ಪ್ರಶ್ನೆಗಳಿಗೆ ಮಾತಾಡುವೆ ಎಂದಿದ್ದಾರೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಮೋಸ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಹೇಳುತ್ತೇನೆ. ನಾನು ಮದುವೆ ಆಗಿದ್ದೀನಿ. ಎಲ್ಲಿ, ಹೇಗೆ ಎಂಬುದರ ಬಗ್ಗೆ ಸ್ವಲ್ಪ ತಾಳ್ಮೆ ಇರಲಿ, ಎಲ್ಲವೂ ಎಂದು ಪ್ರತಿಕ್ರಿಯಿಸಿದ್ದಾರೆ.