Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?

ಏನಿದು ಬದಲಾವಣೆ?
ಆಸ್ಪತ್ರೆಗೆ ದಾಖಲಾಗುವ ಮಕ್ಕಳಿಗೆ ಮನೆ, ಶಾಲೆಯಲ್ಲಿಯೇ ಇದ್ದೇವೆ ಎಂಬ ಅನುಭವವಾದರೆ ಆತಂಕ ದೂರವಾಗುತ್ತದೆ. ಇದನ್ನರಿತು ಮಕ್ಕಳ ವಾರ್ಡ್ಗಳ ಗೋಡೆಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ವಿವಿಧ ಚಿತ್ರಗಳನ್ನು ಬಿಡಿಸಿ ಅಲಂಕರಿಸಲಾಗಿದೆ. ಹೂ, ಹಣ್ಣು, ಪ್ರಾಣಿಗಳು, ಕಾರ್ಟೂನ್ ಗಳು, ಕ್ರಿಕೆಟ್ ಆಟಗಾರರು ಸೇರಿದಂತೆ ಮಕ್ಕಳು ಇಷ್ಟಪಡುವ ಚಿತ್ರಗಳನ್ನು ಬಿಡಿಸಲಾಗಿದೆ.
ಕಾರ್ಟೂನ್ಗಳು, ಕಂಬಗಳನ್ನು ಸಹ ವಿವಿಧ ಚಿತ್ರಗಳಿಂದ ಅಲಂಕರಿಸಲಾಗಿದೆ. ಮಕ್ಕಳಿಗೆ ಆಸ್ಪತ್ರೆ ಎಂದರೆ ಇರುವ ಭಯವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿ, ಅವರ ರೋಗವನ್ನು ಬೇಗ ಗುಣಮುಖರಾಗುತ್ತಾರೆ ಎಂಬ ಪರಿಕಲ್ಪನೆಯೊಂದಿಗೆ ಚಿತ್ರಗಳನ್ನು ಬಿಡಲಾಗಿದೆ ಎಂದು ಜಿಲ್ಲಾಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ.ಪುಷ್ಪಾ ಹೇಳುತ್ತಾರೆ.
ಆಗಸ್ಟ್ 3ರಂದು ಉದ್ಘಾಟನೆ
ಸದ್ಯ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಒಂದು ಐಸಿಯು ವಾರ್ಡ್, ಒಂದು ಸಾಮಾನ್ಯ ವಾರ್ಡ್ನ್ನು ನವೀಕರಣ ಮಾಡಲಾಗಿದೆ. ಅಲ್ಲದೇ ಇನ್ನೂ 5 ವಾರ್ಡ್ ಗಳನ್ನು ನವೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಗಸ್ಟ್ 3ರಂದು ವಾರ್ಡ್ಗಳು ಉದ್ಘಾಟನೆಗೊಳ್ಳಲಿವೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ಮಹಾರಾಷ್ಟ, ಗೋವಾ ಹಾಗೂ ಕರ್ನಾಟಕದ ವಿವಿಧ ಭಾಗದ ರೋಗಿಗಳು ಬರುತ್ತಾರೆ.
ಈ ಆಸ್ಪತ್ರೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಕೆಲ ವರ್ಷಗಳ ಹಿಂದೆ ಕಳಪೆ ಸೇವೆಯಿಂದಲೇ ಅಪಕೀರ್ತಿಗೆ ಈಡಾಗಿದ್ದ ಬೆಳಗಾವಿ ಜಿಲ್ಲಾಸ್ಪತ್ರೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಬಡ ಕುಟುಂಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಪ್ರಸ್ತುತ ಮಕ್ಕಳ ವಿಭಾಗವು ಆಕರ್ಷಣೆಯಾಗಿದೆ.