Feature articlesKarnataka NewsNationalPolitics
ಬೆಳಗಾವಿ: 82 ಪಶು ಆಂಬುಲೆನ್ಸ್‌ಗೆ ಸಚಿವ ಪ್ರಭು ಚವ್ಹಾಣ್ ಚಾಲನೆ

ಬೆಳಗಾವಿ: ರೈತರು ಹಾಗೂ ಪಶು ಸಂಗೋಪನೆ ಮಾಡುವವರ ಅನುಕೂಲಕ್ಕಾಗಿ ನೀಡಿದ 82 ಪಶು ಚಿಕಿತ್ಸಾ ಆಂಬುಲೆನ್ಸ್‌ಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಂಗಳವಾರ ಹಸಿರು ನಿಶಾನೆ ತೋರಿದರು.
ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಗಳಿಗೆ ‘ಪಶು ಸಂಜಿವಿನಿ’ ಯೋಜನೆ ಅಡಿ ಈ ಆಂಬುಲೆನ್ಸ್‌ಗಳನ್ನು ನೀಡಲಾಗಿದೆ.
ಬೆಳಗಾವಿ ಜಿಲ್ಲೆಗೆ 17, ಗದಗ 8, ಹಾವೇರಿ 9, ಧಾರವಾಡ 8, ಬಾಗಲಕೋಟೆ 13, ವಿಜಯಪುರ 14, ಉತ್ತರ ಕನ್ನಡ ಜಿಲ್ಲೆಗೆ 13 ಆಂಬುಲೆನ್ಸ್ ಹಂಚಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಈ ಸಂದರ್ಭದಲ್ಲಿ ಇದ್ದರು.