ನಿಮ್ಮೂರಿಗಿನ್ನು ಇವರೇ ಇನ್ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 12 ಡಿವೈಎಸ್‌ಪಿ ಮತ್ತು 92 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಸರ್ಕಾರ ಆದೇಶಿಸಿದೆ.
ಡಿವೈಎಸ್‌ಪಿಗಳಾದ ಆರ್.ಮಂಜುನಾಥ್- ಚಿತ್ರದುರ್ಗ ಉಪ ವಿಭಾಗ, ಶರಣಬಸಪ್ಪ ಎಚ್. ಸುಬೇದಾರ್-ಕೊಪ್ಪಳ, ವಿ.ಎಲ್.ರಮೇಶ್- ಕೆಜಿಎಫ್, ಪಿ.ಮುರಳೀಧರ್- ಕೋಲಾರ, ಕೆ.ಎಸ್.
ವೆಂಕಟೇಶ್ ನಾಯ್ಡು- ಮಧುಗಿರಿ, ಆರ್.ವಿ.ಗಂಗಾಧರಪ್ಪ- ಸೋಮವಾರಪೇಟೆ, ವೆಂಕನಗೌಡ ಪಾಟೀಲ್- ಹುಬ್ಬಳ್ಳಿ ರೈಲ್ವೆ ಉಪ ವಿಭಾಗ, ಶ್ರೀಪಾದ ದಶರಥ ಜಲ್ದೆ- ಅಥಣಿ, ಕೆ.ಜಿ.ರಾಮಕೃಷ್ಣ- ಲೋಕಾಯುಕ್ತ, ಎಚ್.ಎಂ.ಶೈಲೇಂದ್ರ- ಮೈಸೂರು ಡಿಸಿಆರ್‌ಇ, ಎನ್.ಪುಷ್ಪಲತಾ- ಬೆಳಗಾವಿ ಡಿಸಿಆರ್‌ಇ ಹಾಗೂ ಎಸ್.ವಿ.ಗಿರೀಶ್- ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿದ್ದಾರೆ.
ಇದರ ಜತೆಗೆ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದ 92 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆಗಿರುವ ಇನ್‌ಸ್ಪೆಕ್ಟರ್‌ಗಳ ಮಾಹಿತಿ ಈ ಕೆಳಗಿನಂತಿದೆ.