BIG NEWS: ನವ್ಯಶ್ರೀ ನನ್ನ ಹೆಂಡತಿಯಲ್ಲ. ಅವರು ಪದೇ ಪದೇ ನನ್ನನ್ನು ಗಂಡ ಎಂದು ಹೇಳುತ್ತಿರುವುದು ಯಾಕೆ? ಪತ್ನಿ ಮಕ್ಕಳ ಬೆಂಬಲದೊಂದಿಗೆ ದೂರು ದಾಖಲಿಸಿದ್ದೇನೆ ಎಂದ ರಾಜಕುಮಾರ್ ಟಾಕಳೆ

ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ನನ್ನ ಪತಿ ಎಂದು ನಿನ್ನೆ ಹೊಸ ಬಾಂಬ್ ಸಿಡಿಸಿದ್ದ ಕಾಂಗ್ರೆಸ್ ನಾಯಕಿ ನವ್ಯಶ್ರೀಗೆ ರಾಜಕುಮಾರ್ ಟಾಕಳೆ ತಿರುಗೇಟು ನೀಡಿದ್ದು, ಹಿಂದೂ ಆಕ್ಟ್ ಅಡಿಯಲ್ಲಿ ಎರಡನೇ ಮದುವೆ ಆಗಲು ಸಾಧ್ಯವಿಲ್ಲ, ಆಕೆಯನ್ನು ನಾನು ಮದುವೆ ಆಗಿಲ್ಲ, ಆಕೆ ನನ್ನ ಪತ್ನಿಯೂ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕಿ ನವ್ಯಶ್ರೀ ವಿರುದ್ಧ ಎಫ್‍ಐಆರ್ ದಾಖಲಿಸಿರುವ ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ತಮ್ಮ ಮೇಲಿನ ಆರೋಪಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಸ್ಪಷ್ಟನೆ ನೀಡಿದ್ದಾರೆ. ನವ್ಯಶ್ರೀಗೂ ನಂಗೂ ಯಾವುದೇ ರೀತಿ ಸಂಬಂಧ ಇಲ್ಲ. ನಾನು ಆಕೆಯನ್ನ ಮದುವೆಯನ್ನೂ ಕಳೆದ ಮೂರನಾಲ್ಕು ತಿಂಗಳಿಂದ ನನಗೆ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದರು. ಅದಕ್ಕಾಗಿ ನಿನ್ನೆ ನನ್ನ ಕುಟುಂಬದ ಬೆಂಬಲವಾಗಿ ನನ್ನ ಹೆಂಡತಿ ಮತ್ತು ನನ್ನ ಕುಟುಂಬ ಸದಸ್ಯರು ನಾವು ನಿನ್ನ ಜೊತೆಗೆ ಇರುತ್ತೇವೆ, ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಕ್ಕೆ ನಿನ್ನೆ ಒಂದು ಎಫ್‍ಐಆರ್ ದಾಖಲಿಸಿದ್ದೇನೆ.
ಪೊಲೀಸ್ ಇಲಾಖೆ ಸೂಕ್ತ ತನಿಖೆ ಮಾಡಿ ನನಗೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ. ಇವತ್ತಲ್ಲ ನಾಳೆ ಸತ್ಯಾಂಶ ಗೊತ್ತಾಗುತ್ತದೆ, ನಾನೊಬ್ಬ ಸರ್ಕಾರಿ ಅಧಿಕಾರಿ ಆಗಿರೋದರಿಂದ ಹೆಚ್ಚಿಗೆ ಮಾತನಾಡಲು ಬರೋದಿಲ್ಲ. ಕಳೆದ ಐದಾರು ತಿಂಗಳಿನಿಂದ ಇದು ನಡೆಯುತ್ತಿದೆ. ನನ್ನ ಗಂಡ ಎಂದು ಹೇಳಿಕೊಂಡು ಬಂದಿದ್ದರು. ನಂತರ ಹಣಕಾಸಿನ ವ್ಯವಹಾರ ಅಂತಾ ಗೊತ್ತಾಗಿತ್ತು. ಬ್ಲಾಕ್ ಮೇಲ್ ಮಾಡಿ 2 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದರು ಎಂದರು.
ಹಿಂದೂ ಆಕ್ಟ್ ಅಡಿಯಲ್ಲಿ ಎರಡನೇ ಮದುವೆ ಆಗಲು ಸಾಧ್ಯವಿಲ್ಲ. ನನಗೆ ಮದುವೆ ಆಗಿದೆ ಅಂತಾ ಎಲ್ಲಾ ಗೊತ್ತಿದ್ದು ನನಗೆ ಈ ರೀತಿ ಮಾಡಿದ್ದಾರೆ ಎಂದು ಬರೆದು ಕೊಟ್ಟಿದ್ದೇನೆ, ಆಡಿಯೋದಲ್ಲಿ ನನ್ನ ಹೆಂಡತಿ ಎಂದು ಹೇಳಿಲ್ಲ. ಅವರ ಮನೆಯಲ್ಲಿ ಸಮಸ್ಯೆ ಆಗಿದ್ದರಿಂದ ನಮ್ಮ ಸಮಾಜದ ಹೆಣ್ಣು ಮಗಳು ಎಂದು ಒಂದು ಮಾನವೀಯತೆ ದೃಷ್ಟಿಯಿಂದ ನನ್ನ ಮನೆಯಲ್ಲಿ ಇರಲಿ ಎಂದು ಹೇಳಿದ್ದೇನೆ, ಆಗ ಮೊಬೈಲ್‍ನಲ್ಲಿ ಮಾತನಾಡುವಾಗ ನನ್ನ ಪತ್ನಿ ಪಕ್ಕದಲ್ಲಿಯೇ ಇದ್ದಳು. ನನ್ನ ಪತ್ನಿ ಹಾಗೂ ಮಗಳಿಗೂ ಕೂಡ ಇದನ್ನು ತಿಳಿಸಿದ್ದೇನೆ. ನನ್ನ ಹೆಂಡತಿ ಹಾಗೂ ಮಕ್ಕಳು ನನ್ನ ಜೊತೆ ಇದ್ದಾರೆ, ಇಷ್ಟು ಸಾಕು ನನಗೆ, ಇನ್ನು ಕಾನೂನು ಮೇಲೆ ನನಗೆ ನಂಬಿಕೆಯಿದೆ. ಹೀಗಾಗಿ ನಂಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು.
ನನ್ನ ಹೆಂಡತಿ ಧೈರ್ಯ ಕೊಟ್ಟು, ಸಹಕಾರ ಕೊಟ್ಟಿದ್ದಕ್ಕಾಗಿ ಎಫ್‍ಐಆರ್ ದಾಖಲಿಸಿದ್ದೇನೆ. ವಿಡಿಯೋ ಸೇರಿ ಎಲ್ಲಾ ಚೆಕ್ ಮಾಡಲಿ, ಮುಂದೆ ನಿಮಗೆ ಎಲ್ಲಾ ಸತ್ಯಾಂಶ ಗೊತ್ತಾಗುತ್ತದೆ. ಇನ್ನು ನವ್ಯಶ್ರೀ ಜೊತೆಗೆ ಬೆಂಗಳೂರಿನಲ್ಲಿ ತಿಲಕ್ ನಮ್ಮ ಮಾವ ಎಂದು ಪರಿಚಯ ಮಾಡಿದ್ದರು, ಆಮೇಲೆ ಗೊತ್ತಾಯ್ತು ಮಾವ ಅಲ್ಲ, ಫ್ರೇಂಡ್ ಅಂತಾ. ಈಗ ಮಾವನೂ ಅಲ್ಲ, ಸಂಬಂಧಿಕನೂ ಅಲ್ಲ ಅಂತಾ ಗೊತ್ತಾಗಿದೆ. ಸೌಮ್ಯ ಇರುವ ವ್ಯಕ್ತಿಗೆ ಈ ರೀತಿ ಆಗಿದೆ, ನಂಗೆ ಆಗಿದ್ದು ಬೇರೆ ಯಾರಿಗೂ ಆಗಬಾರದು ಎಂಬುದು ಈ ಪ್ರಕರಣದಿಂದ ತಿಳಿಯಬೇಕು ಎಂದರು.