21 ಅಕ್ರಮ ಮಸಾಜ್ ಪಾರ್ಲರ್ ಗಳ ಮೇಲೆ ಕ್ರಮ

ಪಣಜಿ: ದಕ್ಷಿಣ ಮತ್ತು ಉತ್ತರ ಗೋವಾದಲ್ಲಿ ಒಟ್ಟು 21 ಅಕ್ರಮ ಮಸಾಜ್ ಪಾರ್ಲರ್ ಗಳು , ಸ್ಪಾ ಸೆಂಟರ್‍ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅಕ್ರಮ ಮಸಾಜ್ ಪಾರ್ಲರ್ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ತೋರಿದ ಯಾವುದೇ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ.
ಈ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದೂರು ಬಂದಿಲ್ಲ. ಈ ಕುರಿತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಕನ್ಕೊಲಿಮ್ ಶಾಸಕ ಯೂರಿ ಅಲೆಮಾಂವ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಾವಂತ್ ಉತ್ತರಿಸಿದರು. ‘2017ರಿಂದ ಇಲ್ಲಿಯವರೆಗೆ ಒಟ್ಟು 21 ಅಕ್ರಮ ಮಸಾಜ್ ಪಾರ್ಲರ್ ಹಾಗೂ ಸ್ಪಾ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಗೋವಾದಲ್ಲಿ 9 ಮತ್ತು ಉತ್ತರ ಗೋವಾದಲ್ಲಿ 12 ಪಾರ್ಲರ್/ಸ್ಪಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಪರ್ವರಿ, ಅಂಜುನಾ, ಕಾಂದೋಲಿಂ, ಸಿಕೇರಿ,ವಾರ್ಕಾ, ಕ್ಯಾವೆಲೋಸಿಮ್, ಮಾಂದ್ರೆಮ್ ಪ್ರದೇಶಗಳು ಒಳಗೊಂಡಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ರಾಜ್ಯದಲ್ಲಿನ ಅಕ್ರಮ ಮಸಾಜ್ ಪಾರ್ಲರ್ ಗಳು, ಸ್ಪಾ ಸೆಂಟರ್ ಗಳ ಮೇಲೆ ನಿಗಾ ವಹಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಯೂರಿ ಅಮೆಮಾಂವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಾವಂತ್, ‘ದಕ್ಷಿಣ ಮತ್ತು ಉತ್ತರ ಗೋವಾದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಈ ತಂಡವು ತಮ್ಮ ವ್ಯಾಪ್ತಿಯಲ್ಲಿರುವ ಅಕ್ರಮ ಮಸಾಜ್ ಪಾರ್ಲರ್ ಗಳು, ಸ್ಪಾ ಕೇಂದ್ರಗಳ ಮೇಲೆ ನಿಗಾ ಇಡಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.