ಹುಂಚ್ಯಾನಟ್ಟಿ ಗ್ರಾಮಸ್ಥರು ಹಾಗೂ ವಕೀಲರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಸ್ಮಶಾನ ಭೂಮಿಗೆ ಆಗ್ರಹಿಸಿ ಡಿಸಿಗೆ ಮನವಿ
ಹುಂಚ್ಯಾನಟ್ಟಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಭೂಮಿಗೆ ಆಗ್ರಹಿಸಿ ಡಿಸಿಗೆ ಮನವಿ

ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಭೂಮಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹುಂಚ್ಯಾನಟ್ಟಿ ಗ್ರಾಮಸ್ಥರು ಹಾಗೂ ವಕೀಲರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹುಂಚ್ಯಾನಟ್ಟಿ ಗ್ರಾಮದ ಟಿಪ್ಪು ಸುಲ್ತಾನ ನಗರ, ಅರ್ಷತ್ ಮೊಹಲ್ಲಾ, ಅಮನ್ ಮೊಹಲ್ಲಾ, ಜೈನಗರ ಸೇರಿದಂತೆ ಕಲಾನಗರ ಐದನೇ ಕ್ರಾಸ್‍ನಲ್ಲಿ ಸುಮಾರು 12 ಸಾವಿರ ಮುಸ್ಲಿಂ ಸಮುದಾಯದ ಜನರು ವಾಸವಿದ್ದಾರೆ.
ಇಲ್ಲಿರುವ ಜನರಿಗೆ ಸ್ಮಶಾನ ಭೂಮಿಯಿಲ್ಲದಂತಾಗಿದೆ. ಪೀರನವಾಡಿ ವ್ಯಾಪ್ತಿಯಲ್ಲಿನ ಗಾಯರಾಣ ಭೂಮಿಯನ್ನು ಸ್ಮಶಾನಕ್ಕೆಂದು ನೀಡಬೇಕು ಎಂದು ಗ್ರಾಮಸ್ಥರು ಹಾಗೂ ವಕೀಲರು ಮನವಿಯಲ್ಲಿ ಒತ್ತಾಯಿಸಿದರು.
ಈ ವೇಳೆ ಬಾರ್ ಅಸೋಸಿಯೇಷನ್‍ನ ಅಧ್ಯಕ್ಷ ಪ್ರಭು ಯತ್ನಟ್ಟಿ, ಯಾಸೀನ ಪಟದೇಕರ, ಅತಿಕ ಸೈಯದ್, ಇಸ್ಮಾಯಿಲ್ ಸೇಠ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.