ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ ಶಾಸಕ ಬೆನಕೆ

ಬೆಳಗಾವಿ : ಬೆಳಗಾವಿ ನಗರದ ಕ್ಯಾಂಪ ಪ್ರದೇಶದಲ್ಲಿ ನಾಗರಿಕರು ಕುಡಿಯುವ ನೀರಿನ ಸರಬರಾಜಿನಲ್ಲಿ ಆಗುತ್ತಿರುವ ತೊಂದರೆಯಿಂದ ಬುದವಾರದಂದು ಪ್ರತಿಭಟನೆ ನಡೆಸಿ ದೂರವಾಣ ಮೂಲಕ ಸ್ಥಳೀಯ ಶಾಸಕ ಅನಿಲ ಬೆನಕೆ ಅವರಿಗೆ ಕ್ಯಾಂಪ ಪ್ರದೇಶದ ಕುಡಿಯುವ ನೀರಿನ ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ದೂರನ್ನು ನೀಡಿದ್ದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆವರು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಇದ್ದುಕೊಂಡೆ ಸಂಬಂಧಿಸಿದ ಕ್ಯಾಂಟೋನ್ಮೆಂಟ ಸಿ.ಇ.ಓ, ಎಲ್ ಆಂಡ್ ಟಿ ಅಧಿಕಾರಿಗಳು ಹಾಗೂ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಜೊತೆಗೆ ದೂರವಾಣ ಮೂಲಕ ಸಂಪರ್ಕ ಮಾಡಿ ತಕ್ಷಣವೆ ನೀರು ಸರಬರಾಜು ಸಮಸ್ಯೆಯನ್ನು ನಿವಾರಿಸುವಂತೆ ತಿಳಿಸಿದರು.
ಬಳಿಕ ದಿನಾಂಕ 21.07.2022 ರ ಗುರುವಾರದಂದು ಶಾಸಕರು ಅವರ ಅನುಪಸ್ಥಿತಿಯಲ್ಲಿ ತಮ್ಮ ಶಾಸಕರ ಕಚೇರಿಯ ಸಿಬ್ಬಂದಿಗಳನ್ನು ಕಳುಹಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಅಲ್ಲಿಯ ಪ್ರಮುಖ ನಿವಾಸಿಗಳೊಂದಿಗೆ ಸಭೆಯನ್ನು ಮಾಡಿ ಎಲ್ ಆಂಡ್ ಟಿ ಅಧಿಕಾರಿಗಳಿಗೆ ಪ್ರತಿನಿತ್ಯ 4 ಲಕ್ಷ ಗ್ಯಾಲನ ನೀರು ಸರಬರಾಜು ಮಾಡಬೇಕು ಹಾಗೂ ಕ್ಯಾಂಟೋನ್ಮೆಂಟ ಇಂಜಿನೀಯರುಗಳು ಪ್ರತಿ 3 ದಿನಕ್ಕೊಮ್ಮೆ ಯಾವುದೇ ಅಡೆತಡೆಯಿಲ್ಲದೆ ಕುಡಿಯುವ ನೀರನ್ನು ನಾಗರಿಕರಿಗೆ ಸರಬರಾಜು ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಿದರು.
ಕ್ಯಾಂಪ ಪ್ರದೇಶದ ಕುಡಿಯುವ ನೀರಿನಲ್ಲಾಗುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಿದ್ದಕ್ಕಾಗಿ ಶಾಸಕರ ಹಾಗೂ ಶಾಸಕರ ಕಚೇರಿಯ ಸಿಬ್ಬಂದಿಗಳ ಕ್ರಮವನ್ನು ಮೆಚ್ಚಿ ಅಲ್ಲಿನ ನಾಗರಿಕರು ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಯಾಂಟೋನ್ಮೆಂಟ ಸಿ.ಇ.ಓ, ಎಲ್ ಆಂಡ್ ಟಿ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳು, ಕ್ಯಾಂಪ ಪ್ರದೇಶದ ಪ್ರಮುಖರು, ಮಹಿಳೆಯರು ಹಾಗೂ ನಾಗರಿಕರು ಸಭೆಯಲ್ಲಿ ಉಪಸ್ಥಿತರಿದ್ದರು.