Crime NewsKarnataka News
ಹಾಡಹಗಲೇ ಆಘಾತಕಾರಿ ಕೃತ್ಯ: ಅಟ್ಟಾಡಿಸಿ ಗುತ್ತಿಗೆದಾರನ ಹತ್ಯೆ

ರಾಯಚೂರು: ರಾಯಚೂರಿನಲ್ಲಿ ಹಾಡಹಗಲೇ ಗುತ್ತಿಗೆದಾರನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಗುತ್ತಿಗೆದಾರ ಮೆಹಬೂಬ್ ಅಲಿ(30) ಹತ್ಯೆಗೀಡಾದವರು ಎಂದು ಹೇಳಲಾಗಿದೆ.
ಬಿಎಸ್‌ಎನ್‌ಎಲ್ ಕಚೇರಿ ಸಮೀಪ ಅವರನ್ನು ಹತ್ಯೆ ಮಾಡಲಾಗಿದೆ. ಹಂತಕರು ಮೆಹಬೂಬ್ ಅಲಿ ಅವರನ್ನು ಅಟ್ಟಾಡಿಸಿಕೊಂಡು ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.