Yadagiri: ಎರಡು ವರ್ಷದಿಂದ ನಕಲಿ ಗೊಬ್ಬರ ಮಾರಾಟ ಜಾಲ ಪತ್ತೆ! ಅನ್ನದಾತರೆ ಎಚ್ಚರ

ದೇಶಕ್ಕೆ ಅನ್ನ ನೀಡುವ ರೈತರಿಗೆ ಅಕ್ರಮ ದಂಧೆಕೊರರು ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ.ಮಾರಾಟ ಮಾಡುವ ವೇಳೆ ನಕಲಿ ರಸಗೊಬ್ಬರ ಗ್ಯಾಂಗ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಡಿಮೆ ಬೆಲೆಯ ಎಸ್ ಎಸ್ ಪಿಯ ರಸಗೊಬ್ಬರ ಖರೀದಿ ಮಾಡಿ ಜೈಕಿಸಾನ್ ಸ್ಮಾರ್ಟ್ ಡಿಎಪಿ ಹೆಸರಿನ ಖಾಲಿ ಚೀಲಗಳಲ್ಲಿ ನಕಲಿ ರಸಗೊಬ್ಬರ ಭರ್ತಿ ಮಾಡಿ ಡಿಎಪಿ ಹೆಸರಿನಲ್ಲಿ ಗೊಬ್ಬರ ಪ್ಯಾಕ್ ಮಾಡಿ ನಕಲಿ ಗೊಬ್ಬರ ಹಳ್ಳಿಗಳಲ್ಲಿ ಮಾರಾಟ ಮಾಡಲಾಗುತಿತ್ತು ಖಚೀತ ಮಾಹಿತಿ ಮೆರೆಗೆ ಗೋಗಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬೀರಲಿಂಗ ಎಂಬ ವ್ಯಕ್ತಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ವೇಳೆ ನಕಲಿ ರಸಗೊಬ್ಬರ ಮಾರಾಟ ಮಾಡುವ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ.
ರೈತರಿಗೆ ಮೋಸನಕಲಿ ರಸಗೊಬ್ಬರ ಪೂರೈಕೆ
ರೈತರಿಗೆ ಮೋಸ ಮಾಡಿ ನಕಲಿ ರಸಗೊಬ್ಬರ ಪೂರೈಕೆ ಮಾಡುತ್ತಿದ್ದ ಆರೋಪಿಗಳಾದ ಬೀರಲಿಂಗ,ಮುತ್ತಪ್ಪ,ಪರಮಾನಂದ,ಭೀಮಸಿಂಗ್ ಅವರನ್ನು ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ ಐ ಅಯ್ಯಪ್ಪ ಅವರ ತಂಡವು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರ ಮಾರ್ಗದರ್ಶನದಂತೆ ದಾಳಿ ಮಾಡಿ ನಕಲಿ ಗೊಬ್ಬರ ಮಾರಾಟ ಮಾಡುವ ಪ್ರಕರಣ ಬೇಧಿಸಿದ್ದಾರೆ.
ಎರಡು ವರ್ಷದಿಂದ ನಕಲಿ ಗೊಬ್ಬರ ದಂಧೆ
ಆರೋಪಿತರು ಕಳೆದ ಎರಡು ವರ್ಷದಿಂದ ಕಲಬುರಗಿ,ವಿಜಯಪುರ, ಯಾದಗಿರಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಗಾರು ಹಂಗಾಮಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ.
ನಕಲಿ ರಸಗೊಬ್ಬರ ಜಪ್ತಿ
520 ಚೀಲ ನಕಲಿ ರಸಗೊಬ್ಬರ, ನಕಲಿ ಜೈ ಕಿಸಾನ್ ಸ್ಮಾರ್ಟ್ ಡಿಎಪಿ ಹೆಸರಿನ 330 ಚೀಲಗಳು ಹಾಗೂ ಚೀಲಗಳನ್ನು ಹೊಲೆಯುವ ಎರಡು ಯಂತ್ರಗಳನ್ನು ಗೋಗಿ ಪೊಲೀಸರು ಜಪ್ತಿ ಮಾಡಿದ್ದಾರೆ.ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅನ್ನದಾತರೆ ಎಚ್ಚರ
ಮುಂಗಾರು ಹಂಗಾಮಿನಲ್ಲಿ ನಿಮ್ಮ ಊರಿಗೆ ಬಂದು ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಡಿಎಪಿ ರಸಗೊಬ್ಬರ ಇದೆ ಖರೀದಿ ಮಾಡಿ ಉತ್ತಮ ಫಸಲು ಬೆಳೆ ಬರುತ್ತದೆಂದು ಅಕ್ರಮ ದಂಧೆಕೊರರ ಬಣ್ಣದ ಮಾತಿಗೆ ಮರಳಾಗದೇ ರೈತರು ರಸಗೊಬ್ಬರ ಹಾಗೂ ಬೀಜ ಖರೀದಿ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು.
ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಗೋಗಿ ಪೊಲೀಸ ಠಾಣೆ ಯಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ರೈತರು ರಸಗೊಬ್ಬರ ಹಾಗೂ ಬೀಜ ಖರೀದಿ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು.ಕಳಪೆ ಮಟ್ಟದ ರಸಗೊಬ್ಬರದ ಬಗ್ಗೆ ಎಚ್ಚರವಹಿಸಬೇಕು.ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತರಬೇಕೆಂದರು.
ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕೆಂದು ಕಿವಿಮಾತು ಹೇಳಿದ್ದಾರೆ.
ಗೋಗಿ ಪೊಲೀಸರು ನಕಲಿ ರಸಗೊಬ್ಬರ ಜಾಲ ಪ್ರಕರಣ ಬೇಧಿಸಿದ್ದು ರೈತರು ಮೋಸ ಹೋಗುವದು ತಪ್ಪಿದೆ.ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ಸುಮ್ಮನಿರದೇ ಅಕ್ರಮ ದಂಧೆಕೊರರ ಬಗ್ಗೆ ಪ್ರಕರಣ ದಾಖಲಿಸಿ ನಕಲಿ ಮಾರಾಟ ದಂಧೆಗೆ ಬ್ರೇಕ್ ಹಾಕಬೇಕಿದೆ.