ಬೆಳಗಾವಿಯಲ್ಲಿ ಎಲ್ಲಿ ಬೇಕಾದ್ರೂ ವಾಹನಗಳನ್ನು ರಾಜಾರೋಷವಾಗಿ ಜನ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಹೇಳವರಿಲ್ಲ, ಕೇಳವರಿಲ್ಲ: ಎಲ್ಲಿ ಬೇಕಾದ್ರೂ ವಾಹನಗಳ ಪಾರ್ಕಿಂಗ್..!
ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿರಕು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಎಲ್ಲಿ ಬೇಕಾದ್ರೂ ವಾಹನಗಳನ್ನು ರಾಜಾರೋಷವಾಗಿ ಜನ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಇದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆ ಆಗುತ್ತಿದೆ. ಇದನ್ನು ತಡೆಗಟ್ಟಬೇಕಿದ್ದ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿಯ ರಾಮಲಿಂಗಕಿಂಡಗಲ್ಲಿಯ ಶೇರಿ ಗಲ್ಲಿ ಕ್ರಾಸ್‍ನಲ್ಲಿ ರಸ್ತೆಯ ಪಕ್ಕದಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿದೆ. ಬೆಳಿಗ್ಗೆ ಪಾರ್ಕಿಂಗ್ ಮಾಡಿದ ವಾಹನಗಳು ರಾತ್ರಿಯಾದ್ರೂ ಅಲ್ಲಿಯೇ ಇರುತ್ತವೆ.
ಇದರಿಂದ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಇದು ಒಂದು ದಿನ ಕಥೆ ಅಲ್ಲ, ಪ್ರತಿ ದಿನವೂ ಇದೇ ರೀತಿ ಇಲ್ಲಿ ಅನಧಿಕೃತವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ರೋಸಿ ಹೋಗಿರುವ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ವೈಫಲ್ಯಕ್ಕೆ ಕಿಡಿಕಾರುತ್ತಿದ್ದಾರೆ.
ಇನ್ನು ಇಲ್ಲಿಯೇ ಪಕ್ಕದಲ್ಲಿರುವ ಚರಂಡಿಗಳನ್ನು ಸ್ವಚ್ಛ ಮಾಡಿ ಅದೆಷ್ಟು ದಿನಗಳು ಆಗಿದೆಯೋ..? ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಇನ್ನು ಹೈವೋಲ್ಟೇಜ್ ಅಂಡರ್ ಕೇಬಲ್ ವರ್ಕಿಂಗ್ ಕೂಡ ಸರಿಯಾಗಿ ಮಾಡಿಲ್ಲ. ವಿದ್ಯುತ್ ಕೇಬಲ್ ಹೊರಗೆ ಕಾಣಿಸುತ್ತಿದ್ದು, ಅಪಾಯಕ್ಕೆ ಆಹ್ವಾನ ಕೊಡುವಂತಾಗಿದೆ. ಒಟ್ಟಾರೆ ಶೇರಿ ಗಲ್ಲಿ ಹಲವು ಅವ್ಯವಸ್ಥೆಗಳ ಆಗರವಾಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿರಕು ಆಗ್ರಹಿಸಿದ್ದಾರೆ.