ಬೆಳಗಾವಿ: ಪ್ರೀತಿ ಸಿಗದ ಹಿನ್ನೆಲೆ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
ಪ್ರೀತಿ ಮಾಡಿದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ

ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಯಸಿ ಇದು ಕೆಟ್ಟ ಕನಸು ಎಂದು ಮರೆತು ಬಿಟ್ಟು ಬಿಡು ಎಂದಿದ್ದಕ್ಕೆ ಪ್ರೀತಿ ಮಾಡಿದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬಸವಕಾಲೋನಿಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ರಾಮಚಂದ್ರ ಬಸಪ್ಪ ತೇಣಗಿ (29) ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂ.ಎ ವಿದ್ಯಾಭ್ಯಾಸ ಮಾಡುತ್ತಿದ್ದ, ಕೊಲೆಯಾದ ಯುವತಿ ಕೆಎಲ್ಇ ಆಸ್ಪತ್ರೆಯಲ್ಲಿ ನಸ್೯ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಕೆಂಚಪ್ಪ ಪಂಚಣ್ಣವರ (30) ಇಬ್ಬರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ರೇಣುಕಾ ಇದೊಂದು ಕೆಟ್ಟ ಕನಸು ಎಂದು ಪ್ರೀತಿಯನ್ನು ಮರೆತು ಬಿಡು ಎಂದಿದ್ದಳು. ಆದರಿಂದ ಯುವತಿಯನ್ನು ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಯುವಕ ಆತ್ಮಹತ್ಯೆ ಎಪಿಎಂಸಿ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಯುವಕನ ತಂದೆ ಬಸವಂತ ತೆಣಗಿ, ಈ ಕುರಿತಂತೆ ಆತ ಮನೆಯಲ್ಲಿ ಯಾರಿಗೂ ಹೇಳಿಲ್ಲ. ಹೇಳಿದ್ದರೆ ಏನಾದರೂ ಮಾಡಬಹುದಿತ್ತು. ಭೂತರಾಮನಹಟ್ಟಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಓದಿಕೊಂಡು, ಸಿಇಟಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ. ಮಂಗಳವಾರ ಊರಿಗೆ ಬಂದಿದ್ದ. ಹೋಗಬೇಡಪ್ಪ ನಾಳೆ ಹೋಗು ಎಂದಿದ್ದಕ್ಕೆ ಕೇಳದೇ ಬಂದಿದ್ದಾನೆ. ಫೋನ್ ಮಾಡಿದರೆ ವಾಪಸ್ ಮಾಡುತ್ತೇನೆ ಎಂದು ಹೇಳಿದ್ದ. ಹುಡುಗಿಯೂ ಕೂಡ ನಮ್ಮ ಸಮಾಜದವಳೆ. ಈ ಕುರಿತಂತೆ ಹೇಳಿದ್ದರೆ ನಾವು ಏನಾದರೂ ಮಾಡಬಹುದಿತ್ತು. ಆದರೆ ಈ ರೀತಿಯಲ್ಲ ಆಗಿದೆ. ನಮಗೆ ಈ ಕುರಿತಂತೆ ಯಾವುದೂ ಮಾಹಿತಿಯಿಲ್ಲ ಎಂದರು.
ಇನ್ನು ಸ್ವಲ್ಪ ದುಡುಕಿದ್ದ ಕಾರಣ ಈ ಪ್ರೀತಿಯಲ್ಲಿ ಎರಡು ಜೀವಗಳೇ ಬಲಿಯಾಗಿವೆ. ಇನ್ನು ಹಿರಿಯರು ನಮಗೆ ಹೇಳಿದ್ದರೆ ನಾವು ಏನಾದರೂ ಮಾಡಬಹುದಿತ್ತು ಎಂದು ಈಗ ಮರುಗುತ್ತಿದ್ದಾರೆ. ಇನ್ನಾದರೂ ಯುವಜನತೆ ಈ ರೀತಿ ಮಾಡುವ ಮುನ್ನ ಯೋಚನೆ ಮಾಡಬೇಕೆಂಬುದು ಬುದ್ಧಿಜೀವಿಗಳ ಆಗ್ರಹವಾಗಿದೆ.