ಶಂಕರಗೌಡಾ ಪಾಟೀಲರಿಗೆಇಂದು ಹುಟ್ಟುಹಬ್ಬದ ಸಂಭ್ರಮ. ಬೆಳಗಾವಿ ರಾಣಿಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿತ್ತು.

ಕರ್ನಾಟಕ ಸರ್ಕಾರದ ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡಾ ಪಾಟೀಲರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದಾಕಾಲ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಶಂಕರಗೌಡಾ ಪಾಟೀಲರಿಗೆ ಇಂದು ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿತ್ತು.
ಬೆಳಗಾವಿಯ ಬಡವರ ಬಂಧು-ಸಮಾಜ ಸೇವಕ ಬುಡಾ ಅಧ್ಯಕ್ಷ, ಮುಖ್ಯಮಂತ್ರಿಗಳ ಸಲಹಾಗಾರ, ಶಂಕರಗೌಡ ಪ್ರತಿಷ್ಠಾನದಿಂದ ಅನೇಕ ಸಾಮಾಜೀಕ ಉಪಕ್ರಮಗಳ ಮೂಲಕ ಸಮಾಜದ ಏಳ್ಗೆಗೆ ಪಣತೊಟ್ಟ, ಬೆಳಗಾವಿ ಬಿಜೆಪಿಯ ಹಿರಿಯ ನಾಯಕ ಕರ್ನಾಟಕ ಸರ್ಕಾರದ ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡಾ ಪಾಟೀಲರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದುಅವರು ಬೆಳಗಾವಿ ರಾಣಿಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದಾದ ಬಳಿಕ ವೈಭವ ನಗರದಲ್ಲಿರುವ ನಂದನ ಮಕ್ಕಳ ಧಾಮಕ್ಕೆ ತೆರಳಿ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಬಡವರ ಬಂಧು- ಸಾಮಾಜೀಕಕಾರ್ಯಕರ್ತ ಶಂಕರಗೌಡ ಪಾಟೀಲರ ಹುಟ್ಟುಹಬ್ಬದ ಹಿನ್ನೆಲೆ ಅನಾಥ ಏಡ್ಸ್ ಪೀಡಿತ ಅನಾಥ ಮಕ್ಕಳಿಗೆ ಸಹಾಯಧನ ವಿತರಣೆ ಮತ್ತು ಬಡವರಿಗೆ ಅನ್ನದಾನ ಮಾಡುವ ಮೂಲಕ ಅವರ ಅಭಿಮಾನಿಗಳಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ದೇವರು ಅವರಿಗೆ ಆರ್ಯುರಾರೋಗ್ಯ ಸಂಪತ್ತು ನೀಡಲಿ. 17 ಸಾವಿರ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬರುತ್ತಿದೆ.2021 ರಲ್ಲಿ 22 ಕೋಟಿ ಸಹಾಯಧನ ಕಾರ್ಮಿಕರಿಗೆ ಬಂದಿದೆ.ಕಾರ್ಮಿಕರ ಕಲ್ಯಾಣಕ್ಕಾಗಿ 2008 ರಲ್ಲಿ ಸ್ಥಾಪಿಸಿದ ಸಂಘಟನೆಯೂ ಸಹಕಾರಿಯಾಗಿದೆ. ಅವರು ಸ್ಥಾಪಿಸಿದ ಯೋಗಕೇಂದ್ರವೂ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ಸಹಕಾರಿ ಯಾಗಿದೆ ಎಂದು ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಎನ್. ಆರ್ ಲಾತೂರ್ ಹೇಳಿದರು.
ದಿಗ್ಗಜ ನಾಯಕರಾದ ಶಂಕರಗೌಡ ಪಾಟೀಲರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ .ದೇವರು ಅವರಿಗೆ ದೀರ್ಘಾಯುಷ್ಯ ನೀಡಲಿ.ಅವರ ಮಾರ್ಗದರ್ಶನ ನಮಗೂ ಸಿಗಲಿ.ಸಮಸ್ತ ಬಿಜೆಪಿ ಮತ್ತು ಸಕಲ ಮರಾಠಾ ಸಮಾಜದ ವತಿಯಿಂದ ಶಂಕರಗೌಡ ಪಾಟೀಲರಿಗೆ ಹುಟ್ಟುಹಬ್ಬದ ಶುಭಾಷಯಗಳೆಂದು ಬಿಜೆಪಿ ಓಬಿಸಿ ಮೋರ್ಚಾ ಮುಖಂಡ ಕಿರಣ ಜಾಧವ ಕೂಡ ಹಾರೈಸಿದರು.
ಹಿರಿಯ ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲರ ಹುಟ್ಟುಹಬ್ಬದ ನಿಮಿತ್ಯ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಸಾಮಾಜೀಕ ಕಾರ್ಯಗಳ ಮೂಲಕ ಇಂದು ಅವರ ಹುಟ್ಟುಹಬ್ಬವನ್ನುಆಚರಿಸಲಾಗುತ್ತಿದೆ ಎಂದು ರಾಜಶೇಖ ರ್‍ಢೋಣಿ ತಿಳಿಸಿದರು.
ಇನ್ನು ಹುಟ್ಟುಹಬ್ಬದ ಶುಭಾಷಯಗಳನ್ನು ಸ್ವೀಕರಿಸಿ ಮಾತನಾಡಿದ ಶಂಕರಗೌಡ ಪಾಟೀಲ ಅವರು ಎಲ್ಲ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೂ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈಗ ದೇಶದ ಯುವಪೀಳಿಗೆ ಎಚ್ಚೆತ್ತುಕೊಂಡಿದೆ.ಭ್ರಷ್ಟಾಚಾರದ ವಿರುದ್ಧಧ್ವನಿ ಎತ್ತುತ್ತಿದೆ.ಬರುವ ದಿನಗಳಲ್ಲಿ ಹೊಸ ಮುಖಗಳಿಗೆ ಮಣೆಹಾಕಿ ದೇಶದ ಉನ್ನತಿಗಾಗಿ ಶ್ರಮಿಸಲಾಗುವುದು. ಹೊಸ-ಹೊಸ ಜನರನ್ನು ಶಾಸಕರನ್ನಾಗಿಸಿ ಸಮಾಜಸೇವೆಗೆ ಸಹಕಾರ ನೀಡಲಾಗುವುದು ಎಂದರು.
ಭಾಗ್ಯನಗರದ ಶಾಲೆಗೆ ತೆರಳಿ ಸಹಾಯ ವಿತರಿಸಿದರು.ನಂತರ ಶಾಂತಾಯಿ ವೃದ್ಧಾಶ್ರಮಕ್ಕೆ ತೆರಳಿ ಹಿರಿಯರೊಂದಿಗೆ ಕಾಲ ಕಳೆದರು.ಈ ವೇಳೆ ಮದನಕುಮಾರ ಭೈರಪ್ಪನವರ, ಗಜಾನನ ಮಿಸಾಳೆ, ಗುಂಡು ಮಾಸ್ತಮರ್ಡಿ, ರಾಜಶೇಖರ್‍ಢೋಣಿ, ಸುಜೀತ್ ಮುಳಗುಂದ, ಪ್ರವೀಣ ಪಾಟೀಲ ಮುಂತಾದವರು ಉಪಸ್ಥಿತರಿದ್ಧರು.