ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಹಿಂದುಳಿದ ವರ್ಗಗಳ ವಸತಿ ನಿಲಯ ವರ್ಗಾವಣೆ ಖಂಡಿಸಿ ಇಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಪ್ರತಿಭಟನೆ
ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಹಿಂದುಳಿದ ವರ್ಗಗಳ ವಸತಿ ನಿಲಯವನ್ನು ಅಜಂ ನಗರ ವಸತಿ ನಿಲಯಕ್ಕೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಇಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಬೆಳಗಾವಿಯ ಆಂಜನೇಯ ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಅದನ್ನು ಅಜಂ ನಗರದ ವಸತಿನಿಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಅಜಂ ನಗರದ ವಸತಿ ನಿಲಯದಲ್ಲಿ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿಯೂ ಕೂಡ ಮೂಲ ಸೌಲಭ್ಯಗಳ ಕೊರತೆಇದೆ.
ಇನ್ನು ನಮ್ಮನ್ನೂ ಕೂಡ ಅಲ್ಲಿಗೆ ಸ್ಥಳಾಂತರ ಮಾಡುವುದರಿಂದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕÀ ಪ್ರಗತಿಗೆ ತೊಂದರೆಯಾಗುತ್ತಿದೆಕಿನ್ನು ಕೆಲ ಕಾಲೇಜಿನ ವಿದ್ಯಾರ್ಥಿಗಳಿಗೆ ಇದು ಸುಮಾರು ಎರಡು ಕಿಲೋ ಮೀಟರ್‍ದಷ್ಟು ದೂರವಾಗುತ್ತದೆ. ಹಾಗಾಗಿ ಆಂಜನೇಯ ನಗರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ನಮ್ಮ ಇನ್ ನ್ಯೂಸ್‍ನೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ನಮ್ಮ ಹಾಸ್ಟೇಲ್ ಈಗಾಗಲೇ ಆಂಜನೇಯ ನಗರದಲ್ಲಿದೆ. ಈಗ ಅದನ್ನು ಅಜಂ ನಗರಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ಈಗಾಗಲೇ ಅಜಂ ನಗರದ ಹಾಸ್ಟೇಲ್‍ನಲ್ಲಿ 120 ವಿದ್ಯಾರ್ಥಿಗಳಿದ್ದು ಅದು ಫುಲ್ ಆಗಿದೆ. ಅದರಲ್ಲಿ ನಮಗೆ ವಸ್ತುಗಳನ್ನು ಇಟ್ಟುಕೊಳ್ಳಬೇಕೆಂದ್ರೆ ಜಾಗಾ ಇಲ್ಲ.
ಇದರಿಂದಾಗಿ ಊಟ ಹಾಗೂ ವಸತಿಗೆ ಅಲ್ಲಿ ಎಲ್ಲರಿಗೂ ಅಸ್ತವ್ಯಸ್ತವಾಗುತ್ತದೆ. ಇನ್ನು ಕೆಲ ವಿದ್ಯಾರ್ಥಿಗಳು ಆಂಜನೇಯ ನಗರ ಹಾಸ್ಟೇಲ್‍ನಂಬಿ ಪಾಸ್ ತೆಗೆಸಿಲ್ಲ. ಇನ್ನು ಅವರಿಗೆ ಇನ್ನು ಎರಡು ಮೂರು ತಿಂಗಳಿರುವ ಕಾಲೇಜು ಅವಧಿಗೆ ಪಾಸ್ ತೆಗೆಸಬೇಕಾಗುತ್ತಿದೆ. ಹಾಗಾಗಿ ಬಡ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಇದೇ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ದಲಿತ ಮುಖಂಡರಾದ ಮಲ್ಲೇಶ ಚೌಗಲೆ ರವರು, ಬೆಳಗಾವಿಯ ಆಂಜನೇಯ ನಗರದಲ್ಲಿನ ಹಾಸ್ಟೇಲ್‍ನ್ನು ಅಜಂ ನಗರಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ.
ಆದರೆ ಇಲ್ಲಿರುವ ಹಲವು ಅಧಿಕಾರಿಗಳು ಹೊಸಬರಾಗಿದ್ದಾರೆ. ಇಲ್ಲಿನ ಕಾಲೇಜನ್ನು ಮಾಡಿದ್ದೇ ಸಿಟಿಯಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ. ಇಲ್ಲಿಗೆ ಅನೇಕ ವಿದ್ಯಾರ್ಥಿಗಳು ತಮ್ಮ ಮನೆ ಮಠಗಳನ್ನು ಬಿಟ್ಟು ಇಲ್ಲಿಗೆ ಓದಲು ಬವರುತ್ತಾರೆ. ಇಂದು ಅವರ ಸಹಾಯಕ್ಕಾಗಿ ಯಾರೂ ಇಲ್ಲ. ಕೂಡಲೇ ಅಧಿಕಾರಿಗಳು ಈ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹಾರ ಮಾಡಬೇಕು. ಇಲ್ಲವಾದ್ರೆ ಎಲ್ಲಾ ದಲಿತ ಸಂಘಟನೆಗಳಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ದಲಿತ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.