ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ
ಶೂ, ಸಾಕ್ಸ್ ಒದಗಿಸಲು 132 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ
ಕೊರೊನಾದಂತಹ ಮಹಾಮಾರಿ ಈಡೀ ವಿಶ್ವವನ್ನೇ ಕಾಡಿದ್ದ ಎಲ್ಲರಿಗೂ ಗೊತ್ತಿದೆ. ಆಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆ ವೇಳೆಯಲ್ಲೇ ಮಕ್ಕಳು ಶೂ, ಸಾಕ್ಸ್ ವಿತರಣೆಯಿಂದ ವಂಚಿತರಾಗಿದ್ದಾರೆ.
ಈ ವರ್ಷ ಯಾವುದೇ ಆತಂಕವಿಲ್ಲದೇ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈ ಬಾರಿಯಾದ್ರೂ ಶೂ, ಸಾಕ್ಸ್ ಸಿಕ್ರೆ ಖುಷಿಯಾಗುತ್ತಾರೆ. ಅಂತೆಯೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಒಂದು ಜೊತೆ ಕಪ್ಪು ಶೂ, ಬಿಳಿ ಸಾಕ್ಸ್
ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಶಾಲಾ ಮಕ್ಕಳಿಗೆ ಒಂದು ಜೊತೆ ಕಪ್ಪು ಶೂ ಮತ್ತು ಬಿಳಿ ಸಾಕ್ಸ್ ಗಳನ್ನು ನೀಡಲಾಗುವುದು ಎಂದು ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಅವರು ಹೇಳಿದ್ರು.
ಸುಮಾರು 43 ಲಕ್ಷದ 37 ಸಾವಿರ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಗಳನ್ನು ನೀಡಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದ್ರು.