ನಿಮ್ಮ ಮಕ್ಕಳ ತೂಕ ಹೆಚ್ಚಿಸಲು ಈ ಆರೋಗ್ಯಕರ ಆಹಾರಗಳನ್ನು ಪ್ರತಿನಿತ್ಯ ತಿನ್ನಿಸಿ

ಮಕ್ಕಳ ದೇಹದ ತೂಕವನ್ನು ಹೆಚ್ಚಿಸಲು ಆಹಾರ ಹೇಗೆ ಮುಖ್ಯವಾಗುತ್ತದೆ
ಈ ಮಕ್ಕಳು ಸಾಮಾನ್ಯವಾಗಿ ಅವರಿಗೆ ತಾಯಂದಿರು ನೀಡುವ ಎಲ್ಲಾ ಆಹಾರ ಪದಾರ್ಥಗಳು ಇಷ್ಟವಾಗುವುದಿಲ್ಲ. ಇಷ್ಟವಾದರೆ ಸ್ವಲ್ಪ ಜಾಸ್ತಿ ತಿನ್ನುತ್ತವೆ, ಅದೇ ಇಷ್ಟವಾಗದೆ ಹೋದರೆ ಅದನ್ನು ಮುಟ್ಟಿ ಕೂಡ ನೋಡಲ್ಲ. ಮಕ್ಕಳು ಬೆಳೆಯುತ್ತಿರುವ ವಯಸ್ಸಿನಲ್ಲಿ ಅವರ ದೇಹದ ತೂಕವನ್ನು ಆರೋಗ್ಯಕರವಾಗಿ ಕಾಪಾಡುವಂತೆ ಮಾಡುವುದು ಪೋಷಕರಾದವರಿಗೆ ಒಂದು ದೊಡ್ಡ ಸವಾಲು ಅಂತಾನೆ ಹೇಳಬಹುದು.
ಬೆಳೆಯುತ್ತಿರುವ ವಯಸ್ಸಿನಲ್ಲಿ, ಮಕ್ಕಳು ದಿನವಿಡೀ ಶಾಲೆಗಳಲ್ಲಿ ಮತ್ತು ಮನೆಯ ಹತ್ತಿರ ಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗುತ್ತಾರೆ ಮತ್ತು ಸಾಕಷ್ಟು ಸಕ್ರಿಯರಾಗಿರುತ್ತಾರೆ. ಅದಕ್ಕಾಗಿಯೇ ಅವರಿಗೆ ಆರೋಗ್ಯಕರ ಆಹಾರದ ಅಗತ್ಯ ತುಂಬಾನೇ ಇರುತ್ತದೆ. ಆದಾಗ್ಯೂ, ಕೆಲವು ಮಕ್ಕಳು ಎಷ್ಟೇ ಆಟವಾಡಿ ಬಂದರೂ ಸಹ ಆಹಾರ ತಿನ್ನಲು ತುಂಬಾನೇ ನಿರಾಕರಿಸುತ್ತಾರೆ, ಆದರೆ ಅನೇಕ ಮಕ್ಕಳು ಆಡುವ ಆಟಕ್ಕೆ ತಕ್ಕಂತೆ ಊಟ ಮಾಡುತ್ತವೆ ಮತ್ತು ಇನ್ನೂ ಕೆಲವು ಮಕ್ಕಳು ಎಷ್ಟೇ ಊಟ ಮಾಡಿದರೂ ಸಹ ತೂಕ ಮಾತ್ರ ಸ್ವಲ್ಪವೂ ಜಾಸ್ತಿಯಾಗುವುದಿಲ್ಲ.
ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಸಾಕಷ್ಟು ಪೌಷ್ಠಿಕಾಂಶವನ್ನು ಹೇಗೆ ನೀಡುವುದು ಎಂಬುದು ಪೋಷಕರಿಗೆ ಒಂದು ಸವಾಲಾಗಿ ಪರಿಣಮಿಸುತ್ತದೆ. ಇದಕ್ಕಾಗಿ, ಮಕ್ಕಳು ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಮಕ್ಕಳ ಆರೋಗ್ಯಕರ ತೂಕ ಹೆಚ್ಚಳಕ್ಕೆ ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.
1. ಬಾಳೆಹಣ್ಣುಗಳು
ಬಾಳೆಹಣ್ಣುಗಳು ಶಕ್ತಿಯ ತ್ವರಿತ ಮೂಲವಾಗಿದೆ ಮತ್ತು ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್ ಗಳಿಂದ ತುಂಬಿರುತ್ತದೆ, ಇದು ಆರೋಗ್ಯಕರ ತೂಕ ಹೆಚ್ಚಳಕ್ಕೆ ತುಂಬಾನೇ ಒಳ್ಳೆಯದು. ಹೆಚ್ಚುವರಿಯಾಗಿ, ಈ ಹಣ್ಣನ್ನು ಮಿಲ್ಕ್ ಶೇಕ್ ಗಳು, ಹಣ್ಣಿನ ಸಲಾಡ್ ಗಳು ಮತ್ತು ಕೆನೆಭರಿತ ಸಿಹಿತಿಂಡಿಗಳ ರೂಪದಲ್ಲಿ ಸೇವಿಸಬಹುದು, ಇದನ್ನು ಮಕ್ಕಳು ತಿನ್ನಲು ತುಂಬಾನೇ ಇಷ್ಟಪಡುತ್ತಾರೆ.
2. ದೇಸಿ ತುಪ್ಪ
ದೇಸಿ ತುಪ್ಪದಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳೊಂದಿಗೆ ವಿಟಮಿನ್ ಇ ಮತ್ತು ಕೆ ಇರುತ್ತದೆ. ಈ ಜೀವಸತ್ವಗಳು ಮತ್ತು ಪೋಷಕಾಂಶಗಳು ನಿಮ್ಮ ಮಗುವಿನ ದೇಹದ ತೂಕವನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿವೆ ಎಂದು ಹೇಳಬಹುದು.
3. ಹಾಲು
ಯಾವುದೇ ಮಗುವಿನ ಆಹಾರದಲ್ಲಿ ಹಾಲು ಪ್ರಮುಖ ಆಹಾರವಾಗಿದೆ. ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂನಿಂದ ತುಂಬಿರುವುದರಿಂದ, ಇದು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಕ್ಕಳಿಗೆ ಹಾಲು ಕುಡಿಯಲು ಅಭ್ಯಾಸ ಮಾಡಿಸಿದರೆ ತುಂಬಾನೇ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
4. ಮೊಟ್ಟೆಗಳು
ಮೊಟ್ಟೆಗಳು ಪ್ರೋಟೀನ್ ಗಳು, ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿದೆ. ಮಕ್ಕಳು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಅವುಗಳನ್ನು ಅತ್ಯಂತ ಬೇಡಿಕೆಯ ಆರೋಗ್ಯಕರ ಆಹಾರವೆಂದು ಸಹ ಪರಿಗಣಿಸಲಾಗುತ್ತದೆ. ಅವು ಅನುಪಾತದ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತವೆ.
5. ಆಲೂಗಡ್ಡೆ
ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಗಳಿವೆ, ಇದು ಮಕ್ಕಳ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ವಿನಮ್ರ ತರಕಾರಿಯಲ್ಲಿ ಕಾರ್ಬೋಹೈಡ್ರೇಟ್ ಗಳು, ಅಮೈನೋ ಆಮ್ಲಗಳು ಮತ್ತು ಆಹಾರದ ನಾರಿನಂಶವು ಸಮೃದ್ಧವಾಗಿದೆ, ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಇದು ರುಚಿಕರವಾಗಿರುತ್ತದೆ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವಂತಹ ಆಹಾರ ಪದಾರ್ಥವಾಗಿದೆ.