ಬೆಳಗಾವಿ ನಗರದಲ್ಲಿ ಡಾಗ್ ಕಾರ್ಯಾಚರಣೆಗೆ ಮುಂದಾದ ಪಾಲಿಕೆ

ಬೆಳಗಾವಿ ನಗರದಲ್ಲಿ ಜನರು ಬೀದಿ ನಾಯಿಗಳ ಹಾವಳಿಗೆ ಹೈರಾಣಾಗಿದ್ದರು. ದಿನದಿಂದ ದಿನಕ್ಕೆ ಬೀದಿ ನಾಯಿಗಳ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಈ ಕುರಿತಂತೆ ಶಾಸಕ ಅಭಯ್ ಪಾಟೀಲ್ ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಬೆಳಗಾವಿಯಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಪಾಲಿಕೆ ಸಿಬ್ಬಂದಿ ಮುಂದಾಗಿದ್ದಾರೆ.
ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಬೆಳಗಾವಿಯ ನಾಗರಿಕರು ಬೀದಿ ನಾಯಿಗಳ ಕಾಟಕ್ಕೆ ಹೈರಾಣಾಗಿದ್ದರು. ಕಳೆದ 6 ತಿಂಗಳಲ್ಲಿ 14278 ಜನರಿಗೆ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ 1360 ನಾಯಿ ಕಡಿತ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಕೋವಿಡ್ ಲಾಕಡೌನದಿಂದ ಜನರ ಓಡಾಟ ಕಡಿಮೆ ಇತ್ತು. ಹಾಗಾಗಿ ಲಾಕಡೌನ್ ಬಳಿಕ ಬೀದಿ ನಾಯಿಗಳ ಹಾವಳಿ ಮತ್ತೆ ಹೆಚ್ಚಳವಾಗಿದೆ.
ಈಗ ಜನ ಫ್ರೀ ಆಗಿ ಓಡಾಡುತ್ತಿದ್ದಾರೆ. ಇನ್ನೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಈಗ ಬೆಳಗಾವಿ ಮಹಾನಗರ ಪಾಲಿಕೆಯಿಂದ ಆಪರೇಷನ್ ಡಾಗ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಈ ಹಿಂದೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಶಾಸಕ ಅಭಯ ಪಾಟೀಲ್ ಪಾಲಿಕೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು. ಶಾಸಕ ಅಭಯ್ ಪಾಟೀಲ್ ಮಾತಿನಿಂದಾಗಿ ಪಾಲಿಕೆಯು ಈಗ ಮಹಾನಗರದಲ್ಲಿ ನಾಯಿಗಳನ್ನ ಸೆರೆ ಹಿಡಿದು ಸಂತಾನ ಹರಣ ಚಿಕಿತ್ಸೆ ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ರೆ ಬೆಳಗಾವಿ ಪಾಲಿಕೆ ಬಿಟ್ಟು ಉಳಿದ ಸ್ಥಳೀಯ ಸಂಸ್ಥೆಗಳು ಮಾತ್ರ ಈ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ.
ಬೆಳಗಾವಿ: ಮಹಾನಗರ ಪಾಲಿಕೆ ‘ಆಪರೇಷನ್ ಡಾಗ್’ ಆರಂಭ
ಇನ್ನು ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್‍ರವರು, ಬೆಳಗಾವಿಯಲ್ಲಿ ಆಪರೇಷನ್ ಬೀದಿ ನಾಯಿ ಆರಂಭವಾಗಿದೆ. ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ. ಒಂದು ಬಡಾವಣೆಯಲ್ಲಿ ಹಿಡಿದು ಇನ್ನೊಂದು ಬಡಾವಣೆಯಲ್ಲಿ ಬಿಡೋದು ಆಗಬಾರದು. ಆಹಾರ ಸಿಗೋ ಸ್ಥಳದಲ್ಲಿ ಬಿಟ್ಟು ಬರಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರವೊಂದರಲ್ಲಿ 1 ಸಾವಿರಕ್ಕೂ ಅಧಿಕ ಬೀದಿಗಳು ಇವೆ. ನಾಯಿ ಕಚ್ಚಿದರೆ ಔಷಧಿ ಸಹ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಔಷಧಿ ಕೊರತೆ ಇದ್ರೆ ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.
ಇನ್ನು ನಾಯಿ ಕಡಿತ ಪ್ರಕರಣ ಹಾಗೂ ಸರಕಾರಿ ಆಸ್ಪತ್ರೆಗಳನ್ನು ಔಷಧಿ ಲಭ್ಯತೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ಮಹೇಶ್ ಕೋಣಿರವರು, ಬೆಳಗಾವಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ 14,278 ನಾಯಿ ಕಡಿತ ಪ್ರಕರಣ ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1360 ನಾಯಿ ಕಡಿತ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಕೋವಿಡ್ ಲಾಕ್‍ಡೌನ್ ಹಿನ್ನೆಲೆ ಜನರ ಓಡಾಟ ಕಡಿಮೆ ಇತ್ತು. ಈಗ ಜನ ಫ್ರೀ ಆಗಿ ಓಡಾಡುತ್ತಿದ್ದು, ನಾಯಿಗಳ ಹಾವಳಿ ಜಾಸ್ತಿ ಇದೆ.
ಈ ಬಗ್ಗೆ ನಮ್ಮ ಇಲಾಖೆಯ ಎಲ್ಲಾ ಸಭೆಗಳಲ್ಲೂ ಈ ಬಗ್ಗೆ ಚರ್ಚೆ. ಇತ್ತೀಚೆಗೆ ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಶೀಲನೆ ವೇಳೆ ಅತಿಹೆಚ್ಚು ನಾಯಿ ಕಡಿತ ಕೇಸ್ ಪತ್ತೆಯಗಿವೆ. ಆರೋಗ್ಯ ಇಲಾಖೆ ಜೊತೆ ಪಶುಸಂಗೋಪನೆ ಸೇರಿ ಇತರ ಇಲಾಖೆಗಳು ಕೂಡಿ ಕೆಲಸ ಮಾಡಬೇಕು. ಪಶು ಆಸ್ಪತ್ರೆಗಳಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಶುವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಜಿಲ್ಲೆಯಲ್ಲಿ ಅಗತ್ಯ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಇದ್ದು ಯಾವುದೇ ಕೊರತೆ ಇಲ್ಲ. ಜಿಲ್ಲೆಯಲ್ಲಿ 1548 ವಯಲ್ಸ್ ಲಸಿಕೆ ಲಭ್ಯವಿದೆ. ನಾಯಿ ಕಡಿತ ಅμÉ್ಟೀ ಅಲ್ಲ ಕೆಲವರು ನಾಯಿ ಟಚ್ ಮಾಡಿದ್ರು ಬಂದು ಲಸಿಕೆ ಪಡೀತಾರೆ ಎಂದರು.