ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿಎಂ ಅಭ್ಯರ್ಥಿಗಳನ್ನು ನಿರ್ಧಾರ ಮಾಡುತ್ತಾರೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಲಡಾಯಿ: ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದೇನು..!!

ಕಾಂಗ್ರೆಸ್ ಪಕ್ಷದಲ್ಲಿ ಈಗ ಸಿಎಂ ಅಭ್ಯರ್ಥಿಗಳ ಬಹಳಷ್ಟು ಹೆಸರುಗಳು ಕೇಳಿ ಬರುತ್ತಿವೆ. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿಎಂ ಅಭ್ಯರ್ಥಿಗಳನ್ನು ನಿರ್ಧಾರ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪಕ್ಷದಲ್ಲಿದ್ದಾಗ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧವಾಗಿ ಕಾರ್ಯ ಮಾಡಬೇಕಾಗುತ್ತದೆ. ಪಕ್ಷದಲ್ಲಿ ಒಂದು ಸಿದ್ಧಾಂತವಿದೆ, ಒಂದು ಶಿಸ್ತಿದೆ. ನಾವು ಅದಕ್ಕೆ ಬದ್ಧವಾಗಿ ಕಾರ್ಯ ಮಾಡಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಎಲ್ಲ ಕಡೆಗಳಿಂದಲೂ ಕೂಡ ಲಾಭವಾಗಲಿದೆಯೇ ಹೊರತಾಗಿ ನಷ್ಟವಿಲ್ಲ. ಇದೇ ವೇಳೆ ಬೆಳಗಾವಿಯಲ್ಲಿನ ಸಭೆಗೆ ಜಿಲ್ಲಾ ಅಲ್ಪಸಂಖ್ಯಾತ ನಾಯಕರು ಹಾಜರಾಗದ ಕುರಿತಂತೆ ಮಾತನಾಡಿದ ಅವರು, ಸಭೆಗೆ ಎಲ್ಲರನ್ನೂ ಕೂಡ ಆಹ್ವಾನಿಸಲಾಗಿತ್ತು. ಆದರೆ ಅವರು ಊರಲ್ಲಿ ಇಲ್ಲದ್ದರಿಂದ ಸಭೆಗೆ ಹಾಜರಾಗಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ತಾಯಿ ಬಂಜೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಹಾಗೇನು ಇಲ್ಲ. ಬಿಜೆಪಿಯಲ್ಲಿ ನಾಲ್ಕು ಜನ ವಿಶೇಷವಾಗಿದ್ದಾರೆ. ಅವರು ಬಿಜೆಪಿಯಲ್ಲಿ ಮಾತನಾಡುವುದಕ್ಕಾಗಿಯೇ ಇದ್ದಾರೆ. ಅವರ ಮಾತಿಗೆಲ್ಲ ಪ್ರತಿಕ್ರಿಯೆ ನೀಡಲು ಅಗತ್ಯವಿಲ್ಲ. ಇದಕ್ಕೆಲ್ಲ ಮುಂದೆ ಜನ ಉತ್ತರ ನೀಡುತ್ತರೆ ಎಂದರು.
ಇನ್ನು ಕಾಂಗ್ರೆಸ್‍ನಲ್ಲಿ ಸಿಎಂ ರೇಸ್ ಅಭ್ಯರ್ಥಿಗಳು ಬಹಿರಂಗ ಹೇಳಿಕೆ ನೀಡುತ್ತಿರುವ ಕುರಿತಂತೆ ಮಾಧ್ಯಮಗ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಎಲ್ಲರೂ ಕೂಡ ಕೇಳಬಹುದು. ದಲಿತರು, ಲಿಂಗಾಯತರು, ಒಕ್ಕಲಿಗರು, ಮುಸಲ್ಮಾನರು ಎಲ್ಲರೂ ಕೂಡ ನಮ್ಮ ಸಮುದಾಯದವರೇ ಸಿಎಂ ಆಗಲಿ ಎಂದು ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ. ಕೊನೆಗೆ ಹೈ ಕಮಾಂಡ್ ಸಿಎಂ ಅಭ್ಯರ್ಥಿಯನ್ನು ನಿರ್ಧಾರ ಮಡುತ್ತಾರೆ.
ಇನ್ನೂ ಪಕ್ಷ ಯಾರನ್ನೂ ಕೂಡ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಅಲ್ಲಿಯವರೆಗೆ ಈ ಐದಾರು ಹೆಸರುಗಳು ಹರಿದಾಡುತ್ತಲೇ ಇರುತ್ತವೆ. ಇದರಿಂದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಾಗುವುದಿಲ್ಲ. ಇದರಿಂದ ಪಕ್ಷವೇ ಅಂತಿಮವಾಗಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಅರವಿಂದ ದಳವಾಯಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕೂಡ ಉಪಸ್ಥಿತರಿದ್ದರು.