
ಬೆಳಗಾವಿ: ಬೆಳಗಾವಿ ಕೆ ಎಲ್ ಇ ಪದವೀಧರ ಸ್ಕೂಲ್ ಆಫ್ ಹೊಟೆಲ್ ಮ್ಯಾನೇಜ್ಮೆಂಟ್ ವಿಶ್ವದಾಖಲೆ ನಿರ್ಮಿಸಿದೆ.
ಬರೋಬ್ಬರಿ 201ಕ್ಕೂ ಹೆಚ್ಚು ಖಾದ್ಯಗಳನ್ನು ಸಿದ್ಧಪಡಿಸಿ ಪ್ರದರ್ಶಿಸುವ ಮೂಲಕ ಒಂದು ವಿಶೇಷ ಹಾಗೂ ವಿನೂತನವಾದ ಆಹಾರ ಖಾದ್ಯವನ್ನು ನಿರ್ಮಿಸಿದ ದಾಖಲೆಗೆ ಪಾತ್ರವಾಗಿದೆ.
ಕಲಾಂ ವಿಶ್ವ ದಾಖಲೆ ಬುಕ್ ಕಾರ್ಯಕ್ರಮವು ಅಧಿಕೃತವಾಗಿ ಆಯೋಜಿಸಿದ್ದ ಖಾದ್ಯ ತಯಾರಿಕೆಯಲ್ಲಿ ಕೆ ಎಲ್ ಇ ಹೊಟೆಲ್ ಮ್ಯಾನೇಜ್ಮೆಂಟ್ ವಿಶ್ವ ದಾಖಲೆ ಬರೆದಿದೆ. ಈ ಬಗ್ಗೆ ಹೋಟೆಲ್ ನಿರ್ವಹಣಾ ವಿಭಾಗದ ಪ್ರಾಂಶುಪಾಲ ನಂದಕುಮಾರ್ ಮಾಹಿತಿ ನೀಡಿದರು.
ಚೆನ್ನೈನಿಂದ ಕಂಪನಿಯ ತಂಡದ ಸದಸ್ಯರು ಕೆ ಎಲ್ ಇ ವಿಶ್ವವಿದ್ಯಾಲಯದ (ಕಾಹೆರ್, ಜೆ ಎನ್ ಎಂಸಿ) ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೆ ಎಲ್ ಇ ಹೋಟೆಲ್ ಮ್ಯಾನೇಜ್ ಮೆಂಟ್ ವಿಭಾಗವು 190+ಕಿಂತ ಹೆಚ್ಚು ಆಹಾರ ಧಾನ್ಯಗಳನ್ನು ಸಿದ್ಧಪಡಿಸಿತ್ತು. ಅದರಲ್ಲಿಯೂ ಸಿರಿಧಾನ್ಯಗಳನ್ನು ಬಳಕೆಮಾಡಿಕೊಂಡ ಆಹಾರಗಳು, ಇಂದಿನ ಫಾಸ್ಟ್ ಫುಡ್ಸ್, ಬೇಕರಿ ಆಹಾರಗಳು ಸೇರ್ಪಡೆಗೊಂಡಿದ್ದವು. ಆಮೂಲಕ ತರಹೇವಾರಿ ಭಕ್ಷಗಳಲ್ಲಿ ಪ್ರಮುಖ ಸಾಂಪ್ರದಾಯಿಕ ಆಹಾರಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಕೆ ಎಲ್ ಇ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ವಿದ್ಯಾರ್ಥಿಗಳು ಒಟ್ಟು 201ಕ್ಕೂ ಅಧಿಕ ರುಚಿಕರವಾದ ಸ್ವಾದಿಷ್ಠವಾದ ಖಾದ್ಯವನ್ನು ಸಿದ್ಧಪಡಿಸಿ ಕಲಾಂ ವಿಶ್ವ ದಾಖಲೆ ಬುಕ್ ಗೆ ಸೇರ್ಪಡೆಯಾಗಿದ್ದಾರೆ.
ವಿಶ್ವದಾಖಲೆ ಉದ್ಘಾಟನಾ ಸಮಾರಂಭದಲ್ಲಿ ಕೆ ಎಲ್ ಇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿ.ಎ.ಕೋಠಿವಾಲೆ, ಡೆಪ್ಯೂಟಿ ರಜಿಸ್ಟ್ರಾರ್ ಡಾ.ಎಂ.ಎಸ್.ಗಣಾಚಾರಿ ಉಪಸ್ಥಿತರಿದ್ದರು. ಕಲಾಂ ವಿಶ್ವದಾಖಲೆ ಬುಕ್ ದಿಂದ ಮುಖ್ಯ ನಿರ್ಣಾಯಕರಾಗಿ ಡಾ.ಐಗಿರಿ ಲೋಕೇಶ್ (ಸಿಇಓ), ಡಾ.ಆರ್.ಹರೀಶ್ ಆಗಮಿಸಿದ್ದರು.