ನವ್ಯಶ್ರೀ ಬ್ಲ್ಯಾಕ್ ಮೇಲ್ ಪ್ರಕರಣ: ಒಟ್ಟು 10 ಸೆಕ್ಷನ್ ಗಳಡಿ ರಾಜಕುಮಾರ್ ಟಾಕಳೆ ವಿರುದ್ಧ ಕೇಸ್ ದಾಖಲು

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ 10 ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಪ್ರಕರಣ ಕೆಲ ದಿನಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದು, ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ಹನಿಟ್ರ್ಯಾಪ್, ವಂಚನೆ ಸೇರಿದಂತೆ ಹಲವು ದೂರು ದಾಖಲಿಸಿದ್ದರು.
ಈ ಎಲ್ಲಾ ಬೆಳವಣಿಗಳ ಬೆನ್ನಲ್ಲೇ ನವ್ಯಶ್ರೀ, ರಾಜಕುಮಾರ್ ನನ್ನನ್ನು ಕಿಡ್ನ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದರು. ರಾಜಕುಮಾರ್ ಟಾಕಳೆ ನನ್ನ ಪತಿ. 2020ರ ಮೇನಲ್ಲಿ ನಾವು ಮದುವೆಯಾಗಿದ್ದೆವು. ಮೊದಲ ಪತ್ನಿ ಇದ್ದರೂ ತನ್ನನ್ನು ವಿವಾಹವಾಗಿ ಮೋಸ ಮಾಡಿದ್ದಾನೆ ಅಲ್ಲದೇ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿ ಜೀವ ಬೆದರಿಕೆ ಹಾಕಿದ್ದಾಗಿ ದೂರಿದ್ದರು.
ಇದೀಗ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ನವ್ಯಶ್ರೀ, ರಾಜಕುಮಾರ್ ಟಾಕಳೆ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಅಲ್ಲದೇ ರಾಜಕುಮಾರ್ ಟಾಕಳೆ ವಿರುದ್ಧ 10 ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.
ರಾಜಕುಮಾರ್ ಟಾಕಳೆ ವಿರುದ್ಧ ದಾಖಲಾದ ಕೇಸ್ ಗಳು:
ಸೆಕ್ಷನ್ 376 – ಅತ್ಯಾಚಾರ
ಸೆಕ್ಷನ್ -366 ಕಿಡ್ನಾಪ್
ಸೆಕ್ಷನ್ – 312 -ಗರ್ಭಪಾತ
ಸೆಕ್ಷನ್ – 420 – ಮೋಸ
ಸೆಕ್ಷನ್ – 354 – ಮಹಿಳೆ ಮೇಲೆ ಹಲ್ಲೆ
ಸೆಕ್ಷನ್ – 504 – ಅವಾಚ್ಯ ಶಬ್ಧಗಳಿಂದ ನಿಂದನೆ
ಸೆಕ್ಷನ್ – 506- ಜೀವಬೆದರಿಕೆ
ಸೆಕ್ಷನ್ – 509 – ಗೌರವಕ್ಕೆ ಧಕ್ಕೆ
ಐಟಿ ಆಕ್ಟ್ 66E – ಖಾಸಗಿ ತನಕ್ಕೆ ಧಕ್ಕೆ
67A-ಪ್ರಚೋದನಾಕಾರಿ ವಿಡಿಯೋ ಅಪ್ ಲೋಡ್ ಸೇರಿದಂತೆ ಒಟ್ಟು 10 ಸೆಕ್ಷನ್ ಗಳಡಿ ರಾಜಕುಮಾರ್ ಟಾಕಳೆ ವಿರುದ್ಧ ಕೇಸ್ ದಾಖಲಾಗಿದೆ.