Karnataka News
ಬೆಳಗಾವಿ: ಅನಾರೋಗ್ಯದಿಂದ ಒಂದೇ ರಾತ್ರಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಸಾವು

ಬೆಳಗಾವಿ: ಒಂದೇ ರಾತ್ರಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.
ಸಶಸ್ತ್ರ ಮೀಸಲು ಉಪನಿರೀಕ್ಷಕ ಸುರೇಶ ಆರ್. ತಹಶೀಲ್ದಾರ್ ಜಠರದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು ಸಶಸ್ತ್ರ ಮುಖ್ಯ ಪೇದೆ ದುಂಡಪ್ಪ ಕೆ. ಮಗ್ದೂಮ್ ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಬ್ಬರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.