Crime NewsKarnataka News
BIG NEWS: ಟಾಕಳೆ ವಿರುದ್ಧ ಅತ್ಯಾಚಾರ, ಅಪಹರಣ, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಪ್ರಕರಣ ದಾಖಲು

ಬೆಳಗಾವಿ: ರಾಜ್ಯ ಸರ್ಕಾರದ ಸರ್ಕಾರಿ ಅಧಿಕಾರಿಯಾಗಿರುವಂತ ರಾಜಕುಮಾರ ಟಾಕಳೆ ವಿರುದ್ಧ, ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಅತ್ಯಾಚಾರ, ಗರ್ಭಪಾತ, ಮೋಸದ ಆರೋಪ ಹೊರಿಸಿ, ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನವ್ಯಶ್ರೀ ತನ್ನ ಕೈಬರಹದಲ್ಲೇ 12 ಪುಟಗಳ ದೂರನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದಂತ ದೂರಿನಲ್ಲಿ ಟಾಕಳೆ ವಿರುದ್ಧ ಅತ್ಯಾಚಾರ, ಅಪಹರಣ, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ತರುವುದು ಹಾಗೂ ಖಾಸಗಿ ತನಕ್ಕೆ ಧಕ್ಕೆ ಆರೋಪ, ಲೈಂಗಿಕ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವ ಆರೋಪ ಮಾಡಲಾಗಿದೆ.
ಕಾಂಗ್ರೆಸ್ ಯುವ ಮುಖಂಡೆ ನವ್ಯಶ್ರೀ ನೀಡಿರುವಂತ ದೂರಿನ ಆಧಾರದ ಮೇಲೆ ಬೆಳಗಾವಿಯ ಎಂಪಿಎಸಿ ಠಾಣೆಯ ಪೊಲೀಸರು ರಾಜಕುಮಾರ ಟಾಕಳೆ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.