ಕತ್ರಿನಾ-ವಿಕ್ಕಿ ಕೌಶಲ್ಗೆ ಜೀವ ಬೆದರಿಕೆ: ಬಂಧಿತನಿಂದ ಕಾರಣ ಕೇಳಿ ಶಾಕ್ ಆದ ಪೊಲೀಸರು!

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ಗೆ ಜೀವಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕಾರಣ ಕೇಳಿದ ಪೊಲೀಸರೆ ಶಾಕ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಂದ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಕ್ಕಿ ಕೌಶಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾದ ಬೆನ್ನಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ಆತನ ಹೇಳಿಕೆಯಿಂದ ಅಚ್ಚರಿಗೊಳಗಾಗಿದ್ದಾರೆ.
ಮನ್ವಿಂದರ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಬಾಲಿವುಡ್ನಲ್ಲಿ ಈಗಷ್ಟೇ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದು, ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ, ಈತ ಕತ್ರಿನಾಳನ್ನು ಮದುವೆಯಾಗಲು ಬಯಸಿದ್ದನಂತೆ ಇದಕ್ಕಾಗಿಯೇ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೇರೆ ಹೆಸರಿನಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ಸ್ಟಾಗ್ರಾಂನ ಈತನ ಖಾತೆಯಲ್ಲಿ ಈ ವ್ಯಕ್ತಿ ತನ್ನ ಹೆಸರನ್ನು ಕಿಂಗ್ ಆದಿತ್ಯ ರಾಜಪೂತ್ ಎಂದು ಬರೆದುಕೊಂಡಿದ್ದಾನೆ. ತನ್ನನ್ನು ತಾನು ನಟ ಎಂದು ಹೇಳಿಕೊಂಡಿದ್ದು, ನನ್ನ ಗೆಳತಿ ಹೆಂಡತಿ ಕತ್ರಿನಾ ಕೈಫ್ ಎಂದೂ ಬರೆದುಕೊಂಡಿದ್ದಲ್ಲದೇ ಕತ್ರಿನಾಳ ಅಧಿಕೃತ ಐಡಿಗೂ ಟ್ಯಾಗ್ ಮಾಡಿದ್ದ. ಸದ್ಯ ಈತನನ್ನು ಇನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.