ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿದ ಬೆಳಗಾವಿ ಸಂಚಾರಿ ಜಾಗೃತ ದಳದ ಸಿಬ್ಬಂದಿ

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಬೆಳಗಾವಿ ಅರಣ್ಯ ಸಂಚಾರಿ ಜಾಗೃತ ದಳದ ತಂಡ ಯಶಸ್ವಿಯಾಗಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಜ್ಜರಿ, ದೇವರಗುಡ್ಡ, ರಾಣೆಬೆನ್ನೂರಿನ ಮೂವರು ವ್ಯಕ್ತಿಗಳು ಹಾಗೂ ಬ್ಯಾಡಗಿ ತಾಲೂಕಿನ ಬಡಪ್ಪನಹಳ್ಳಿ ಗ್ರಾಮದ ಓರ್ವ ವ್ಯಕ್ತಿ, ಹಾವೇರಿ ತಾಲೂಕಿನ ಬರಡಿ ಗ್ರಾಮದ ಓರ್ವ ವ್ಯಕ್ತಿಯನ್ನು ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂಧಿಸುವಲ್ಲಿ ಬೆಳಗಾವಿಯ ಅರಣ್ಯ ಸಂಚಾರಿ ಜಾಗೃತ ದಳದ ಸಿಬ್ಬಂದಿ ಒಟ್ಟು ೫ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ದ ಮೂರು ಕೃಷ್ಣ ಮೃಗದ ಚರ್ಮಗಳು, ವನ್ಯ ಜೀವಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ೪ ತಂತಿಯ ಉರಳುಗಳು, ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಕೃಷ್ಣ ಮೃಗ ಚರ್ಮಗಳನ್ನು ೧೫ ಲಕ್ಷ ಹಣಕ್ಕೆ ಮಾರಾಟ ಮಾಡುತ್ತಿದ್ದ ವೇಳೆ ಜಾಗೃತ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.