Feature articlesKarnataka NewsNational
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಿಗಲಿದೆ ಈ ಎಲ್ಲ ‘ಸೌಲಭ್ಯ’

ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಸೋಮವಾರದಂದು ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಈಗ ದೆಹಲಿಯ ಲ್ಯುಟೆನ್ಸ್ ಪ್ರದೇಶದ 12 – ಜನಪಥ್ ರಸ್ತೆಯಲ್ಲಿರುವ ಐಷಾರಾಮಿ ಬಂಗಲೆಯನ್ನು ನೀಡಲಾಗಿದ್ದು, ಸೋಮವಾರದಂದು ಅವರು ಸ್ಥಳಾಂತರಗೊಂಡಿದ್ದಾರೆ.
ನೀಲಂ ಸಂಜೀವ ರೆಡ್ಡಿಯಿಂದ ದ್ರೌಪದಿ ಮುರ್ಮುವರೆಗೆ, ಜುಲೈ 25 ರಂದೇ ಪ್ರಮಾಣ ವಚನ ಏಕೆ ?
ಇನ್ನು ಮುಂದೆ ರಾಮನಾಥ್ ಕೋವಿಂದ್ ಅವರಿಗೆ ಪ್ರತಿ ತಿಂಗಳು 2.5 ಲಕ್ಷ ರೂ. ಪಿಂಚಣಿ ಸಿಗಲಿದೆಯಲ್ಲದೆ ಒಬ್ಬರು ಆಪ್ತ ಕಾರ್ಯದರ್ಶಿ, ಓರ್ವ ಹೆಚ್ಚುವರಿ ಕಾರ್ಯದರ್ಶಿ, ಓರ್ವ ಸಹಾಯಕ ಹಾಗೂ ಇಬ್ಬರು ಜವಾನರನ್ನು ಸರ್ಕಾರದಿಂದ ಒದಗಿಸಲಾಗುತ್ತದೆ. ಜೊತೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿಗಳವರೆಗೆ ಕಚೇರಿ ವೆಚ್ಚವನ್ನೂ ಸಹ ನೀಡಲಾಗುತ್ತದೆ.