Crime NewsKarnataka News
Trending
15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾ.ಪಂ PDO ರೆಡ್ ಹ್ಯಾಂಡ್ ಆಗಿ ACB ಬಲೆಗೆ

ಕೋಲಾರ: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮಪಂಚಾಯತ್ ನಲ್ಲಿ ನಡೆದಿದೆ.
ಶಂಕರಪ್ಪ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ವೆಂಕಟರಾಜು ಎಂಬುವವರಿಂದ 12 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ ಪಿ ಸುಧೀರ್ ನೇತೃತ್ವದ ತಂಡ ದಾಳಿ ನಡೆಸಿದೆ.
ವೆಂಕಟರಾಜು ಬಳಿ ಖಾತೆ ಬದಲಾವಣೆಗೆ 15 ಸಾವಿರ ಹಣಕ್ಕೆ ಪಿಡಿಒ ಶಂಕರಪ್ಪ ಬೇಡಿಕೆ ಇಟ್ಟಿದ್ದರು. 12 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆಯುವಾಗ ಲಕ್ಷ್ಮೀಪುರದ ಮಯೂರಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಸಿಕ್ಕಿ ಬಿದ್ದಿದ್ದಾರೆ.