PSI ನೇಮಕಾತಿ ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ.!
ಪಿಎಸ್ಐ ಹಗರಣದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು

ಉಡುಪಿ: ಪಿಎಸ್ ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು.ನಾನು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿರುವಾಗ ಅಮೃತ್ ಪೌಲ್ ಮುಂದಿನ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಆಗಲೇ ಇತ್ತು.ಆಗ್ಗಾಗೆ ಮುಖ್ಯಮಂತ್ರಿ ಮನೆಗೆ ಬರುವಾಗ ಕೂಡಾ ನಾನು ಪ್ರಶ್ನೆ ಮಾಡಿದ್ದೆ.
ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು,ಆಪ್ ಗವರ್ನರ್ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ.ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ ಆಗಿದೆ.
ನೀವು ಯುವಜನರಿಗೆ ಮೋಸ ಮಾಡುತ್ತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ.
ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ಇನ್ವೆಸ್ಟಿಗೇಶನ್ ಆಫೀಸರ್ ಆಗುತ್ತಾರೆ.
ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆ ಎಂದು ಹೇಳಿದ್ದಾರೆ. ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ.
ಕರ್ನಾಟಕದಲ್ಲಿ ಲೋಕಾಯುಕ್ತ ಮತ್ತು ಎಸಿಬಿ ಎರಡು ಸಂಸ್ಥೆಗಳಿದ್ದರೂ ಕೂಡ ಭ್ರಷ್ಟಾಚಾರ ನಡೆಯುತ್ತಲೇ ಇದೆ ಎಂದು ಕಿಡಿಕಾರಿದ್ರು.