Crime NewsKarnataka News
ಬೆಳಗಾವಿ: ಕುಖ್ಯಾತ ಸುಲಿಗೆಕೋರನ ಬಂಧನ ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣ
ಬೆಳಗಾವಿ: ಕುಖ್ಯಾತ ಸುಲಿಗೆಕೋರನ ಬಂಧನ ಸದಲಗಾ ಪೊಲೀಸರ ಕಾರ್ಯಾಚರಣೆ

ಸದಲಗಾ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಪೊಲೀಸರು ಕುಖ್ಯಾತ ಸುಲಿಗೆಕೋರನನ್ನು ಬಂಧಿಸಿದ್ದಾರೆ.
ಜುಲೈ 17ರಂದು ನಿಪ್ಪಾಣಿ ಮೂಲದ ರಾಜಶ್ರೀ ರಾವಸಾಬ ಮೋರೆ ಎಂಬ ಮಹಿಳೆ ಡೋಣಿವಾಡಿ ಬಳಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿ ಲಿಫ್ಟ್ ಕೊಡುವುದಾಗಿ ಹೇಳಿ ಕರೆದೊಯ್ದಿದ್ದಾನೆ. ಮಾರ್ಗ ಮಧ್ಯೆ ರಾಜಶ್ರೀ ಅವರ ಮಾಂಗಲ್ಯ ಸರ, ಚೈನ್, ಕಿವಿಯೋಲೆ ಸೇರಿದಂತೆ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಹಿಳೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದೀಗ ಸುಲಿಗೆಕೋರನನ್ನು ಬಂಧಿಸಿದ್ದು, ಆತನಿಂದ 12.5 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸದಲಗಾ ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ ಪಿ ಶ್ಲಾಘಿಸಿದ್ದಾರೆ.