Feature articlesInternationalNationalStories
Trending
247 ಕೋಟಿ ರೂ.ಗೆ ಮನೆ ಮಾರಿದ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತಮ್ಮ ಮನೆ ಮಾರಾಟ ಮಾಡಿದ್ದಾರೆ.
2012ರಲ್ಲಿ 79 ಕೋಟಿ ರೂ.ಗೆ ಖರೀದಿಸಿದ್ದ ಮನೆಯನ್ನು ಇದೀಗ ಅವರು ಬರೋಬ್ಬರಿ 247 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
ಪ್ರಸಕ್ತ ವರ್ಷ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಇದುವರೆಗೆ ನಡೆದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್ ಇದಾಗಿದೆ.
ಲಿಬರ್ಟಿ ಹಿಲ್ ಪ್ರದೇಶದಲ್ಲಿ 1928ರಲ್ಲಿ ನಿರ್ಮಿಸಲಾಗಿರುವ ಮನೆಯು ಒಟ್ಟು 7000 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. 2013ರಲ್ಲಿ ಮನೆಯನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿತ್ತು.
ಜುಕರ್‌ಬರ್ಗ್‌ಗೆ ನೆರೆಹೊರೆಯವರ ಜತೆ ಅಷ್ಟಾಗಿ ಸ್ನೇಹವಿರಲಿಲ್ಲ. ನವೀಕರಣ ವೇಳೆ ನಿರಂತರ ಶಬ್ದದಿಂದ ನೆರೆಹೊರೆಯವರು ಬೇಸತ್ತಿದ್ದರು ಎನ್ನಲಾಗಿದೆ.